ಕುವೆಂಪು ದರ್ಶನ ಸಂದರ್ಶನ

Author : ಜಿ.ಟಿ. ನಾರಾಯಣರಾವ್

Pages 162

₹ 20.00

Buy Now


Year of Publication: 2004
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಕಟ್ಟಡ, ಬಲ್ಮಠ ರೋಡ್, ಮಂಗಳೂರು. 575001

Synopsys

ಕುವೆಂಪು ಜನ್ಮಶತಮಾನೋತ್ಸವದ ನೆವದಲ್ಲಿ ಹಿರಿಯ ಸಾಹಿತಿ ಜಿ ಟಿ ನಾರಾಯಣರಾವ್‌ ಅವರು ರಸರ್ಷಿಗೆ ಅರ್ಪಿಸಿದ ನುಡಿ ನಮನ ಈ ಕೃತಿ. 

ಲೇಖಕರೇ ವಿವರಿಸಿರುವಂತೆ ಇದರಲ್ಲಿ ಮೂರು ವಿಭಾಗಗಳಿದ್ದು ಮೊದಲನೇ ಭಾಗವು ಜಿಟಿನಾ ಅವರು ಕುವೆಂಪು ಮೋಡಿಗೆ ತುತ್ತಾದ ಬಗೆಯನ್ನು ಒಳಗೊಂಡಿದೆ. ಅದರಲ್ಲಿ ದೇಜಗೌ ಲೇಖಕರನ್ನು ’ಕುವೆಂಪು ವೃತ್ತಿಗೆ’ ಹಚ್ಚಿದ ವಿವರವೂ ಇದೆ. 

ವಿಜ್ಞಾನ ಲೇಖಕರೂ ಆದ ರಾವ್‌ ಅವರು ಕುವೆಂಪು ಅವರ ವಿಜ್ಞಾನ ವಾಙ್ಮಯತೆ ಹಾಗೂ ವೈಜ್ಞಾನಿಕ ಮನೋಧರ್ಮವನ್ನು ಎರಡು ಮತ್ತು ಮೂರನೇ ವಿಭಾಗದಲ್ಲಿ ಚರ್ಚಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕದ ಮೇರು ವ್ಯಕ್ತಿತ್ವವನ್ನು ವಿಜ್ಞಾನದಂತಹ ಭಿನ್ನ ದೃಷ್ಟಿಯಿಂದ ನೋಡವ ಯತ್ನದಿಂದಾಗಿಯೇ ಕೃತಿ ಗಮನ ಸೆಳೆಯುತ್ತದೆ. 

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books