ಲಘುಬಗೆ

Author : ರೇಶ್ಮಾ ಭಟ್

Pages 152

₹ 150.00




Year of Publication: 2021
Published by: ಅಕ್ಷರ ಮಂಟಪ ಪ್ರಕಾಶನ
Address: ಹಂಪಿನಗರ, ಬೆಂಗಳೂರು- 560104

Synopsys

‘ಲಘುಬಗೆ’ ಲೇಖಕಿ ರೇಶ್ಮಾ ಭಟ್ ಅವರ ಲಘು ಲಲಿತ ಪ್ರಬಂಧಗಳ ಸಂಕಲನ. ಈ ಕೃತಿಗೆ ಬಿ.ಎಸ್. ಜಯಪ್ರಕಾಶ ನಾರಾಯಣ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ಜನ ಕಾವ್ಯವನ್ನು ಓದಲಿ, ಓದದೇ ಇರಲಿ, ಆದರೆ ಇಂತಹ ಕಾವ್ಯಾತ್ಮಕವಾದ ಭಾಷೆಯನ್ನು ಮಾತ್ರ ಯಾವಾಗಲೂ ಇಷ್ಟಪಡುತ್ತಾರೆ. ಒಬ್ಬ ಓದುಗ ಸಾಹಿತ್ಯದಿಂದ ಬಯಸುವುದೇನೆಂದರೆ, ಓದಿ ಹಗುರಾಗುವುದನ್ನು, ಬದುಕು ಹಸನಾಗಿದೆ ಎನ್ನುವ ಸರಳ ಸತ್ಯದ ಸಾಕ್ಷಾತ್ಕಾರವನ್ನು, ಸಮಾಜ, ಬದುಕು ಎಲ್ಲದರಲ್ಲೂ ಚೆಲುವಿದೆ ಎನ್ನುವಂತಹ ತನ್ನನ್ನು ಪೊರೆಯುವ ಅರಿವನ್ನು ಈ ಪ್ರಬಂಧಗಳು ಇಂತಹ ಶಕ್ತಿಯನ್ನು ಪಡೆದಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು ಎಂದಿದ್ದಾರೆ ಬಿ.ಎಸ್. ಜಯಪ್ರಕಾಶ ನಾರಾಯಣ. ಇಲ್ಲಿ ಕಸಬರಿಕೆಯೆಂಬ ಕಸವರ, ಅಡುಗೆ ಯಜ್ಞಕ್ಕೊಂದು ಪೂರ್ಣಾಹುತಿ, ಮೂಗಿನಾಳವ ಬಗೆದಾಗ, ಧೂಮದೊಂದಿಗೊಂದು ಯಾನ, ಮಶಕವೆಂಬ ಮಾಯೆ ಕಚ್ಚಿ ಕೂಗದೇ ನರರಂ, ಮುನ್ನುಡಿಯ ಪ್ರೀ-ಫೇಸುಗಳು, ನಾಲಿಗೆ ಪೀಳಿಗೆಗಳ ನಡುವೆ, ಸಮ್ಮಾನ ಸಂಹಿತೆ, ಪ್ರೇಮದ ಫಿಲಾಸಫಿ, ಕ್ವಾರಂಟೈನ್ ಕನಸು, ಬೆನಕನೂ ಬೆಕ್ಕಿಗೆರಗುವನು, ಲಾಕ್ಡೌನ್ ಅಡುಗೆಯೂ ಬೆಚ್ಚಿ ಬೀಳುವ ಸುದ್ದಿಗಳೂ, ಮಣೆಯ ಮೇಲೆ ಮಣೆಯ ಪೇರಿಸಿ, ಅಕ್ಕರೆಗೊಂದು ಪಕ್ಕಾ ಹೆಸರು, ತಪ್ಪದ ದಾರಿಯೊಂದು ಬೇಕು ಆಯ್ದುಕೊಡಿ, ರ್ಯಾಸ್ಕಲ್ ರಗಳೆ, ಅಪ್ ವರ್ಡ್ ಡೌನ್ ವರ್ಡ್ ಗಳ ಜೊತೆ, ಲ್ಯಾಪ್ ಟಾಪ್ ಹಾಗೂ ಸೀಮೆಸುಣ್ಣ, ಡೌಟಲ್ಲಿ ಬಿ ಬೇಕಾ, ಮೈಚಳಿ ಸಾಹಿತ್ಯ ಎಂಬ 20 ಲಲಿತ ಪ್ರಬಂಧಗಳು ಸಂಕಲನಗೊಂಡಿವೆ.

About the Author

ರೇಶ್ಮಾ ಭಟ್

ಕವಿ, ಅಂಕಣಕಾರ್ತಿ, ಲೇಖಕಿ ರೇಶ್ಮಾ ಭಟ್ ಅವರು ಮೂಲಕ ಉತ್ತರ ಕನ್ನಡ ಜಿಲ್ಲೆಯವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವ್ ನಲ್ಲಿ ಕನ್ನಡ ಅಧ್ಯಾಪಕಿ. ರೇಶ್ಮಾ ಅವರು ಗಮಕ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿರುವ ಇವರು ಸದ್ಯ ‘ಚಿಂತನ ಬಯಲು’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ನವೆ ನವೋನ್ಮೇಷಶಾಲಿನಿ ಹಾಗೂ ಕಥಾ ವ್ಯವಕಲನ ಇವರ ಕಥಾ ಸಂಕಲನಗಳು.  ...

READ MORE

Related Books