ಲೈಂಗಿಕ ಆರೋಗ್ಯ

Author : ಪದ್ಮಿನಿ ಪ್ರಸಾದ್

Pages 168

₹ 108.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಮಾನವನ ದೈಹಿಕ ಹಸಿವುಗಳಲ್ಲಿ ಲೈಂಗಿಕತೆ ಒಂದು. ಅದರ ಬಗ್ಗೆ ಕೀಳರಿಮೆ ತಾಳುವುದು ಸಲ್ಲದು. ಆರೋಗ್ಯಕರವಾಗಿ ಲೈಂಗಿಕತೆಯನ್ನು ಬಳಸಲು ಸಮರ್ಥರಾದರೆ ಅವರು ಆರೋಗ್ಯಕರ ಹಾಗೂ ನೆಮ್ಮದಿಯ ಕೌಟುಂಬಿಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಇಂತಹ ವಿಚಾರಗಳ ಲೇಖನಗಳ ಸಂಗ್ರಹವೇ -ಲೈಂಗಿಕ ಆರೋಗ್ಯ. ಡಾ. ಪದ್ಮಿನಿ ಪ್ರಸಾದ ಅವರು ರಚಿಸಿದ್ದು, ಮನೋವೈಜ್ಞಾನಿಕತೆಯ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ ವಿಶ್ಲೇಷಣೆ ಮಾಡಿರುವುದಕ್ಕಾಗಿ ಈ ಕೃತಿಗೆ ಡಾ. ಪಿ.ಎಸ್.ಶಂಕರ್ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯಸಾಹಿತ್ಯ ಪ್ರಶಸ್ತಿ’( 2003-04) ಲಭಿಸಿದೆ.

About the Author

ಪದ್ಮಿನಿ ಪ್ರಸಾದ್
(17 October 1952)

ಕರ್ನಾಟಕದ ಪ್ರಸಿದ್ಧ ಪ್ರಸೂತಿ ತಜ್ಞೆ ಪದ್ಮಿನಿ ಪ್ರಸಾದ್ ವೈದ್ಯಕೀಯ ಸಾಹಿತ್ಯದಲ್ಲೂ ಹೆಸರು ಮಾಡಿದ್ದಾರೆ. ಕನ್ನಡ ವಾಹಿನಿಗಳಲ್ಲಿ ಆರೋಗ್ಯ ಮಾಹಿತಿಯ ಕುರಿತು ಕಾರ್ಯಕ್ರಮ ನೀಡುವ ಇವರು ಕನ್ನಡ ಜನರಿಗೆ ಚಿರಪರಿಚಿತರು. 1952 ಅಕ್ಟೋಬರ್ 17 ತುಮಕೂರಿನಲ್ಲಿ ಹುಟ್ಟಿದರು. ವೃತ್ತಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಮತ್ತು ಲೈಂಗಿಕ ಶಾಸ್ತ್ರಜ್ಞೆ. “ಸ್ತ್ರೀ ಲೈಂಗಿಕ ವಿಜ್ಞಾನ, ಲೈಂಗಿಕ ಆರೋಗ್ಯ, ಲೈಂಗಿಕ ಸಾಮರಸ್ಯ, ಲೈಂಗಿಕ ದೀಪ್ತಿ, Marriage guidance for "To Be married" and "Newly Married” ಮುಂತಾದ ವೈದ್ಯಕೀಯ ಸಾಹಿತ್ಯವನ್ನು ಜನರಿಗೆ ನೀಡಿದ್ದಾರೆ. ಅಮೆರಿಕಾದ ಪ್ರತಿಷ್ಠಿತ ವಿಶ್ವ ಲೈಂಗಿಕ ಆರೋಗ್ಯ ...

READ MORE

Reviews

ಹೊಸತು- ನವೆಂಬರ್‌ -2003

ಡಾ|| ಪದ್ಮನಿ ಪ್ರಸಾದ್ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಮಾತ್ರವೇ ಅಲ್ಲದೆ ಲೈಂಗಿಕ ಮತ್ತು ವೈವಾಹಿಕ ಸಲಹಾ ಆರೋಗ್ಯ ತಜ್ಞರೂ ಆಗಿದ್ದಾರೆ. ನಮ್ಮ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆಯೇ ಎಂಬುದು ಇನ್ನೂ ಚರ್ಚೆಯ ಹಂತದಲ್ಲೇ ಇದೆ. ಪತ್ರಿಕೆಗಳ ಹಾಗೂ ದೂರದರ್ಶನದ ವಿವಿಧ ವಾಹಿನಿಗಳ ಮೂಲಕ ಇವರು ಜನರಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಯುವಜನರು ಅತ್ಯಂತ ಮುಜುಗರ ಸಂಕೋಚಗಳಿಂದ ನೋಡುತ್ತಿರುವ ಒ೦ದು ವೈದ್ಯಕೀಯ ಅಧ್ಯಾಯವೇ ಆಗಿರುವ ಈ ಬಗ್ಗೆ ಲೇಖನಗಳಿವೆ.

Related Books