ಲಕ್ಷ್ಮಣ

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 102

₹ 15.00




Year of Publication: 1972
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಲಕ್ಷ್ಮಣ ಪುರಾಣ ಪುರುಷರ ಜೀವನಗಾಥೆ ಪುಸ್ತಕವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ರಾಮಾಯಣದ ಪ್ರಮುಖ ಪಾತ್ರವಾದ ಲಕ್ಷ್ಮಣನ ಜೀವನದ ಬಗೆಗೆ ವಿವರಿಸಲಾಗಿದೆ. ಕೃತಿಯಲ್ಲಿ ಲಕ್ಷ್ಮಣನ ಕುರಿತು ‘ತಮ್ಮನೆಂದರೆ ಹೀಗಿರಬೇಕು’ ಎನ್ನಿಸಿಕೊಳ್ಳುವ, ರಾಮಾಯಣದ ವಿಲಕ್ಷಣ ವ್ಯಕ್ತಿತ್ವ; ಅಸಾಮಾನ್ಯ ಶೂರ, ಕಾರ್ಯಧುರಂಧರ; ಸ್ವಂತಕ್ಕಾಗಿ ಏನನ್ನೂ ಬಯಸದೆ ಇಡೀ ಜೀವನವನ್ನು ತನ್ನ ಅಣ್ಣನ, ರಾಜನ, ರಾಜ್ಯದ ಸೇವೆಯಲ್ಲಿ ಸವೆಸಿದ ತ್ಯಾಗಿ. ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವ /ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅದಕ್ಕೆ ಕಾರಣ ಲಕ್ಷ್ಮಣನ ವ್ಯಕ್ತಿತ್ವ. ತನ್ನ ಅಣ್ಣ ಅತ್ತಿಗೆಗೋಸ್ಕರ ತನ್ನ ಹೆಂಡತಿಯಿಂದಲೂ ಹದಿನಾಲ್ಕು ವರ್ಷ ದೂರವಾಗಿ ಕಾಡು ಮೇಡಿನಲ್ಲಿ ಅಳೆದು ಯುದ್ಧಗೈದ ಅಪರೂಪದ ವ್ಯಕ್ತಿತ್ವ ಲಕ್ಷ್ಮಣನದ್ದು ಎಂದು ಲೇಖಕರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books