ಲಕ್ಷ್ಮೀಶ ಕಾವ್ಯ ವೈಭವ

Author : ಕೆ. ರಾಧಾಕೃಷ್ಣ

Pages 296

₹ 220.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 0804011 4455

Synopsys

ಸಾಹಿತ್ಯ ಅನುಸಂಧಾನದ ಲೇಖನಗಳ ಸಂಕಲನ ಲಕ್ಷ್ಮೀಶ ಕಾವ್ಯ ವೈಭವ ಕೃತಿ. ಪ್ರೊ. ರಾಧಾಕೃಷ್ಣ ಕೆ. ಈ ಅವರ ಈ ಕೃತಿಯು ಮುಖ್ಯವಾಗಿ ಸಾಹಿತ್ಯ ಅದರಲ್ಲೂ ಲಕ್ಷ್ಮೀಶನ ಕಾಲದ ಕಾವ್ಯದ ಬಗ್ಗೆ ಚರ್ಚಿಸುತ್ತದೆ.

Reviews

ಲಕ್ಷ್ಮೀಶ ಕಾವ್ಯ ವೈಭವ 

ರಾಧಾಕೃಷ್ಣ ಕೆ.ಈ. ಕನ್ನಡ ಕಾವ್ಯಲೋಕದಲ್ಲಿ ಉಪಮಾಲೋಲ ಎಂದೇ ಹೆಸರಾಗಿರುವ ಲಕ್ಷ್ಮೀಶ ಕವಿಯ ಕಾವ್ಯದ ವಿಸ್ಕತ ಪರಿಚಯವನ್ನು ನೀಡುವ ಈ ಪುಸ್ತಕದಲ್ಲಿ ಸುಮಾರು 23 ಲೇಖನ ಗಳಿವೆ. ಇಂದಿನ ತಲೆಮಾರಿಗೆ ಬಹುಪಾಲು ಅಪರಿಚಿತನಾಗಿಯೇ ಇರುವ ಲಕ್ಷ್ಮೀಶ ನನ್ನು ಅರಿಯಲು, ಆತನ ಕಾವ್ಯದ ಸೊಗಡನ್ನು ಅನುಭವಿಸಲು ಈ ಲೇಖನಗಳು ಸಹ ಕಾರಿಯಾಗಬಲ್ಲವು. ಕೆ. ಈ. ರಾಧಾಕೃಷ್ಣ ಕೇಶವ ಶರ್ಮ, ಎಚ್. ಎಸ್. ವೆಂಕಟೇಶಮೂರ್ತಿ, ಎನ್. ಎಸ್. ಲಕ್ಷ್ಮಿನಾರಾಯಣಭಟ್ಟ, ಸಾ.ಶಿ.ಮರುಳಯ್ಯ, ಬರಗೂರು ರಾಮಚಂದ್ರಪ್ಪ, ಎಲ್.ಎಸ್.ಮುಕುಂದರಾಜ್ ಮೊದಲಾದ ಹಲವು ಹಿರಿಯ ವಿದ್ವಾಂಸರ ಬರಹಗಳು ಇಲ್ಲಿ ಅಡಕಗೊಂಡಿದ್ದು, ಲಕ್ಷ್ಮೀಶನ ಕಾವ್ಯ ಶಕ್ತಿಯ ವಿವಿಧ ಮಗ್ಗುಲನ್ನು ಪರಿಚಯ ಮಾಡಿಕೊಡುತ್ತವೆ. ....ಲಕ್ಷ್ಮೀಶನ ಕನ್ನಡ ಜೈಮಿನಿ ಭಾರತ ವಿದ್ವಾಂಸರಿರಲಿ, ಅಕ್ಷರಸ್ಥರಲ್ಲದ ರಸಿಕರು ಕೂಡಾ ಮಚ್ಚಿ ಬಾಯೂಡಿಸಿಕೊಂಡ ಕೃತಿ. ಇದನ್ನು ಕೇಳಿದ್ದರೆ ರಸಿಕ, ಓದಿದ್ದರೆ ವಿದ್ಯಾವಂತ, ಅರ್ಥ ಹೇಳಬಲ್ಲವನಾದರೆ ಪಂಡಿ ತೋತ್ತಮ ಎಂಬಮಾನ್ಯತೆ ಕರ್ನಾಟಕದ ಹಳ್ಳಿಗಳಲ್ಲೆಲ್ಲ ಇದ್ದ ಕಾಲವಿತ್ತು.' (ಪುಟ 201. - ಎಸ್.ಎಸ್.ಎಲ್.ಭಟ್ಟ) ಈ ಅಮೂಲ್ಯ ಪುಸ್ತಕ ಪ್ರಕಟಣೆಯನ್ನು ಕನ್ನಡ ಸಾಹಿತ್ಯ ಸೇವೆ ಎಂದು ಪರಿಗಣಿಸಿದರೆ, ಸಪ್ನ ಬುಕ್ ಹೌಸ್ + ಸೇವೆಯನ್ನು ಮಾಡಿದ್ದಾರೆ ಎಂದೇ ಹೇಳಬೇಕು. 

ಕೃಪೆ: ವಿಶ್ವವಾಣಿ, ಪುಸ್ತಕಾವಲೋಕನ (2020 ಜನವರಿ 12)

 

Related Books