ಲೇಖ-ಲೋಕ 4

Author : ವಿಜಯಲಕ್ಷ್ಮಿ ಕೆ. ಎಂ.

Pages 148

₹ 100.00




Year of Publication: 2003
Published by: ಕರ್ನಾಟಕ ಲೇಖಕಿಯರ ಸಂಘ
Address: 206, 2ನೇ ಮಹಡಿ, ವಿಜಯ ಮ್ಯಾನ್‌ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018.

Synopsys

ಲೇಖ-ಲೋಕ 4 ಪುಸ್ತಕವು ಲೇಖಕಿಯರ ಆತ್ಮಕಥನವಾಗಿದ್ದು, ಲೇಖಕಿ ಕೆ. ಉಷಾ ಪಿ ರೈ ಹಾಗೂ ಕೆ.ಎಂ ವಿಜಯಲಕ್ಷ್ಮಿ ಅವರು ಸಂಪಾದಿಸಿದ್ದಾರೆ ಕೃತಿಯ ಪರಿವಿಡಿಯಲ್ಲಿ ಆತ್ಮ ಕಥನ ಓದುವ ಮುನ್ನ, ಉದ್ಘಾಟನಾ ಭಾಷಣ, ಶಾಂತಾದೇವಿ ಮಾಳವಾಡ, ಪದ್ಮಾ ಶೆಣೈ, ಗೀತಾ ನಾಗಭೂಷಣ, ಬಾಗೀರಥಿ ಹೆಗಡೆ, ಕುಲಶೇಖರಿ, ಆನಂದಿ ಸದಾಶಿವರಾವ್‌, ಪದ್ಮಾ ಗುರುರಾಜ್‌, ತುಳಸಿ ವೇಣುಗೋಪಾಲ್‌, ಗಂಗಾ ಪಾದೆಕಲ್‌, ವಸುಮತಿ ಉಡುಪ, ಸರೋಜಿನಿ ಚಾವಲಾರ ಅವರ ಆತ್ಮಕಥನಗಳನ್ನು ಕೃತಿಯು ಹೊಂದಿದೆ. ಇಲ್ಲಿ ಆತ್ಮಕಥೆ ಹೇಳಿಕೊಂಡ ಲೇಖಕಿಯರಿಗೆ ಗತಿಸಿದ ಭೂತಕಾಲದ ಬಗ್ಗೆ ಹೆದರಿಕೆಯಿಲ್ಲ. ಅದು ಅವರ ನೆನಪಿನ ಖಜಾನೆಯನ್ನು ತುಂಬಿಸಿದೆ. ಯಾರೂ ನೋಡದ ಭವಿಷ್ಯದ ಬಗ್ಗೆ ಅವರಿಗೆ ಚಿಂತೆ ಇಲ್ಲ. ಆದರೆ ನಿರೀಕ್ಷೆಯಿದೆ. ಹಾಗಾಗಿ ಇವತ್ತಿನ ಬದುಕಿನಲ್ಲಿ ಎಲ್ಲವನ್ನೂ ಕಾಣುತ್ತಾ ಜೀವಿಸುವುದು, ಅಭಿವ್ಯಕ್ತಿಸುವುದು,ಅವರಿಗೆ ಸಾಧ್ಯವಾಗಿದೆ. ಈ ಆತ್ಮಕಥನದಲ್ಲಿ ಇಂತಹ ಕೆಲವು ಲೇಖಕಿಯರ ಪರಿಚಯ ಓದುಗರಿಗಾಗುತ್ತದೆ.

About the Author

ವಿಜಯಲಕ್ಷ್ಮಿ ಕೆ. ಎಂ.
(19 July 1949)

ಕಾದಂಬರಿಗಾರ್ತಿ, ಕತೆಗಾರ್ತಿ ವಿಜಯಲಕ್ಷ್ಮಿ ಕೆ. ಎಂ. ಅವರು (ಜನನ: 19-07-1949) ದಾವಣಗೆರೆಯವರು. ರಾಷ್ಟಭಾಷಾ ಪ್ರವೀಣ ಪರೀಕ್ಷೆಯನ್ನು ಮುಗಿಸಿ,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಾಖಾಧಿಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ತಂದೆ ಕೆ.ಎಂ. ಕೃಷ್ಣಮೂರ್ತಿ, ತಾಯಿ ಗಿರಿಜಮ್ಮ. `ಸ್ವರ್ಗದ ರೆಕ್ಕೆಗಳು', `ಘಟನೆಗಳು ನಮ್ಮವಲ್ಲ', `ಪರಿವರ್ತನೆ' ಕಾದಂಬರಿಗಳನ್ನು ರಚಿಸಿದ್ದಾರೆ. ‘ಕೆಂಪು ಹೂ’, ‘ಭೇದವಿಲ್ಲದ ಆಸೆಗಳು’, ‘ಪ್ರವಾಹದಲ್ಲಿ ತೇಲುವ ಹೆಣಗಳು’, ‘ಹೊರಬಂದು ಕಲಿಗೆಳತಿ’ ಅವರ ಕತಾ ಸಂಕಲನ. ‘ಉಪಯುಕ್ತ ಕಲಿಕೆ’, ‘ಕರಿ ಚರ್ಮ ಬಿಳಿಯಾಗದು’, ‘ಬಂಗಾರದ ಬೇರುಗಳು’, ‘ಏನಾಗಲಿ ನಾನು’ ಎಂಬ ಮಕ್ಕಳ ಸಾಹಿತ್ಯದ ಕೃತಿಯನ್ನು ರಚನೆ ಮಾಡಿದ್ದಾರೆ. ‘ಸಾವಿನಾಚೆಗೆ’, ‘ಸಮಾನತೆ ನಾಟಕ ಸಾಹಿತ್ಯ’ ಅವರ ನಾಟಕ ಕೃತಿಗಳು.   ‘ಎಚ್.ಎಸ್. ...

READ MORE

Related Books