ಲಿಬಿಡೊ ಬಿಡುವುದಿಲ್ಲ

Author : ಬಿ.ಆರ್. ಲಕ್ಷ್ಮಣರಾವ್

Pages 156

₹ 120.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

'ಲಿಬಿಡೊ ಬಿಡುವುದಿಲ್ಲ' ಕೃತಿಯು ವಿವಿಧ ಸಂದರ್ಭಗಳಲ್ಲಿ ಸಮಕಾಲೀನ ವಿಷಯಗಳ ಕುರಿತು ಬರೆದು ಪ್ರಕಟಗೊಂಡ ಬಿಡಿ ಬರಹಗಳ ಸಂಕಲನವಾಗಿದೆ. ಬಿ.ಆರ್‌. ಲಕ್ಷ್ಮಣರಾವ್‌ ಅವರು ಕಳೆದು ಒಂದೆರಡು ವರ್ಷಗಳಿಂದ ಸಮಾಜದ ವಸ್ತುಸ್ಥಿತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಂದಿಸಿ-ಪ್ರತಿಕ್ರಿಯಿಸಿದ ಲೇಖನಗಳ ಸಂಗ್ರಹ ಇದಾಗಿದೆ. ಕೃತಿಯಲ್ಲಿ ವಿಚಾರ, ಒಡನಾಟ, ಮಾತುಕತೆ, ಮುನ್ನುಡಿ, ಸ್ಪಂದನ ವಿಭಾಗದಲ್ಲಿ ಹಲವು ವಿಷಯಗಳ ಕುರಿತು ಬರೆಯಲಾಗಿದೆ.   ಹೊಸ ವಿಚಾರಧಾರೆಗಳ ಹರಿಕಾರರರು, ಬಿನ್ನಹಕೆ ಬಾಯಿಲ್ಲವಯ್ಯ, ಕಾವ್ಯ ಮತ್ತು ಸಂಗೀತದ ಒಡನಾಟ, ಸುಗಮ ಸಂಗೀತ ನಿಜಕ್ಕೂ ಸುಗಮವೇ?, ನೀವೂ ಭಾವಗೀತೆ ಬರೆಯಬೇಕೆ? ಇಲ್ಲಿವೆ ಕೆಲವು ಟಿಪ್ಸ್‌, ಲಿಬಿಡೊ ಬಿಡುವುದಿಲ್ಲ, ಚಳ್ಳೇಹಣ್ಣು, ಕೊಣ್ಣೂರ ನುಡಿ ಸಡಗರ: ಒಂದು ಸವಿ ನೆನಪು, ಕವಿಯ ಕರೆ, ಏಕದಿನ ಕ್ರಿಕೆಟ್‌ ವಿಶ್ವಕಪ್‌-2019, ವೈಫ್‌ ಅಪ್ರಿಸಿಯೇಷನ್‌ ಡೇ, ಕಾವ್ಯ ನಿ’ವೇದನೆ’.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Reviews

ಅಕ್ಷರ ಲೋಕದ ಸ್ನೇಹ ಸೇತುವೆಯ ಅನಾವರಣ-ವಿಜಯವಾಣಿ-ರವೀಂದ್ರ ಸಿಂಗ್‌

ಲಿಬಿಡೊ ಬಿಡುವುದಿಲ್ಲ-ಪ್ರಜಾವಾಣಿ

‘ಲಿಬಿಡೋ ಬಿಡುವುದಿಲ್ಲ’ ಎಂಬ ಅನುಭವಗಳ ಗುಚ್ಛ

ಬಿ.ಆರ್ ಲಕ್ಷ್ಮಣರಾವ್ ಅವರ 'ಲಿಬಿಡೋ ಬಿಡುವುದಿಲ್ಲ' ಕೃತಿ ಬಿಡಿ ಬರಹಗಳ ಸಂಕಲನ. ಸರಳವಾದ, ತಾತ್ವಿಕವಾದ ಅನೇಕ ಅಂಶಗಳು ಈ ಕೃತಿಯಲ್ಲಿದೆ. ಆಧ್ಯಾತ್ಮ ಹೊಸ ಚಿಂತನೆಗಳಿಂದ ಹಿಡಿದು ಭಾವ ತೀವ್ರತೆಯ ಬರಹಗಳಿವೆ. ಇಡೀ ಪುಸ್ತಕದಲ್ಲಿ ಐದು ಬಗೆಯ ಮೂವತ್ತೆಂಟು ಬರಹಗಳಿವೆ. ಆರಂಭದ ಎಭಾಗ - ವಿಚಾರ ಎನ್ನುವ ಶೀರ್ಷಿಕೆಯಲ್ಲಿದೆ. ಇವು ವಿಚಾರ ಪ್ರಧಾನ ಬರಹಗಳು. ಇಲ್ಲಿ ಜಿಡ್ಡು, ರಜನೀಶರಂಥಾ ಹೊಸ ಕಾಲದ ಹೊಸ ಚಿಂತನೆಗಳ ಆಧ್ಯಾತ್ಮ ಸಾಧಕರ ಬದುಕು, ಚಿಂತನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಹಾಗೇ ಕಾವ್ಯ ಮತ್ತು ಸಂಗೀತದ ಒಡನಾಟ, ಸುಗಮ ಸಂಗೀತದ ಸವಾಲುಗಳು ಇತ್ಯಾದಿ ವಿಷಯಗಳ ಬಗ್ಗೆ ಬರೆದಿದ್ದಾರೆ. ಈ ಸರಣಿಯ ತುಸು ಭಿನ್ನ ಲೇಖನ - 'ಲಿಬಿಡೋ ಬಿಡುವುದಿಲ್ಲ'. ಇದರಲ್ಲಿ ಹಳಬರಿಂದ ಹೊಸಬರವರೆಗೆ ಹರಿದುಬಂದ ಲೈಂಗಿಕತೆ ಕುರಿತ ಸರಳ ವಿಚಾರಗಳಿವೆ. ಪೆಟ್ಟಿಗೆಯಡಿ ಅಪ್ಪ ಬಚ್ಚಿಟ್ಟುಕೊಂಡಿರುತ್ತಿದ್ದ ವಾತ್ಸಾಯನನ ಪುಸ್ತಕದಿಂದ ಈ ಕಾಲದ ಪೋರ್ನ್ ವೀಡಿಯೋಗಳ (ಇದನ್ನು ಅಂಗೈಯಲ್ಲಿ ಅಂತಃಪುರ ಎಂದು ಈ ಲೇಖಕರು ಹೇಳುತ್ತಾರೆ) ತನಕದ ಕಾಮಪುರಾಣ ಈ ಲೇಖನದಲ್ಲಿದೆ. ಈ ಲೇಖನದ ಆಯ್ದ ಭಾಗ ಹೀಗಿದೆ

“ನಾವು ಎಷ್ಟೆಲ್ಲ ಕಷ್ಟಪಟ್ಟು ಗಳಿಸಿದ ಅನುಭವವನ್ನು ಇಷ್ಟೊಂದು ಸಲೀಸಾಗಿ ಪಡೆದಿರುವ ಇಂದಿನ ಯುವ ಜನತೆಯನ್ನು 'ಆಹಾ, ಎಂಥಾ ಭಾಗ್ಯಶಾಲಿಗಳು ಎಂದು ಅಭಿನಂದಿಸೋಣವೇ ಅಥವಾ 'ಇಂದಿನ ಕಾಲದ ಹುಡುಗರು ಗಬ್ಬೆದ್ದು ಹೋಗುತ್ತಿದ್ದಾರೆ, ನಮ್ಮ ಸಂಸ್ಕೃತಿಯ ಗತಿಯೇನು?' ಎಂದು ನಾವೂ ಬೊಬ್ಬೆ ಹೊಡೆಯೋಣವೆ? ನನಗೆ ಅನಿಸುವುದು ಇಷ್ಟು : ನಮ್ಮ ಕಾಮಾಸಕ್ತಿಯಿಂದ ನಾವೇನೂ ಹಾಳಾಗಲಿಲ್ಲ. ಈಗಿನವರೂ ಅಷ್ಟೇ. ನಾವು ಜೀರ್ಣಿಸಿಕೊಂಡ ಹಾಗೆ ಇವರೂ ಎಲ್ಲಾ ಅನುಭವಗಳನ್ನೂ ಜೀರ್ಣಿಸಿಕೊಳ್ಳುತ್ತಾರೆ.' ಇದರಲ್ಲಿ ಒಡನಾಟ ಎಂಬ ವಿಭಾಗದಲ್ಲಿ ಸಾಹಿತಿಗಳ ಜೊತೆಗಿನ ಲೇಖಕರ ಒಡನಾಟವಿದೆ. ವ್ಯಕ್ತಿ ಚಿತ್ರಗಳಂಥಾ ಈ ಬರಹಗಳಲ್ಲಿ ಹಿರಿಯ ಸಾಹಿತಿಗಳ ಕುರಿತ ಆಪ್ತ ನೋಟಗಳಿವೆ. ಹೀಗೆ ಒಂದೇ ಪುಸ್ತಕದಲ್ಲಿ ಹಲವು ಬಗೆಯ ವೈವಿಧ್ಯಮಯ ಬರಹಗಳು ಸಿಗುತ್ತವೆ. 

ಕೃಪೆ : ಕನ್ನಡ ಪ್ರಭ ( 2020 ಜನವರಿ 26)

Related Books