ಲಿಪಿಯ ಹುಟ್ಟು ಮತ್ತು ಬೆಳವಣಿಗೆ

Author : ದೇವರಕೊಂಡಾ ರೆಡ್ಡಿ

Pages 360

₹ 200.00
Year of Publication: 2009
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560096
Phone: 080-22107798

Synopsys

ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ವಿರಳ ಪ್ರಕಾರವಾದ ಲಿಪಿಶಾಸ್ತ್ರದ ಬಗ್ಗೆ ಕೃತಿಗಳು ಅಲಭ್ಯವಿರುವ ಸಂದರ್ಭದಲ್ಲಿ ಡಾ. ದೇವರಕೊಂಡಾರೆಡ್ಡಿಯವರ ಈ ಕೃತಿ ಮೂಡಿ ಬಂದಿರುವುದೇ ಈ ಕೃತಿಯ ವಿಶೇಷತೆಯಾಗಿದೆ.ಲಿಪಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಅನೇಕ ವರ್ಷಗಳ ಆಳವಾದ ಅಭ್ಯಾಸದ ಫಲಶ್ರುತಿಯೇ ಈ ಕೃತಿ. ಅಪ್ಪಟ ಶಾಸ್ತ್ರಗ್ರಂಥವಾದ ಇದನ್ನು ಲಿಪಿಶಾಸ್ತ್ರದ ಬಗ್ಗೆ ಆಸಕ್ತಿಯುಳ್ಳ ಮತ್ತು ಕನ್ನಡದ ಬಗ್ಗೆ ಅಭಿಮಾನವುಳ್ಳ ಎಲ್ಲರಿಗೂ ಉಪಯುಕ್ತವಾದ ಕೃತಿಯಾಗಿದೆ.

About the Author

ದೇವರಕೊಂಡಾ ರೆಡ್ಡಿ
(10 May 1948)

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ಕನ್ನಡದ ಹಿರಿಯ ವಿದ್ವಾಂಸ  ಡಾ. ದೇವರಕೊಂಡಾರೆಡ್ಡಿ ಅವರು ಶಾಸನ, ವಾಸ್ತುಶಿಲ್ಪ ಹಾಗೂ ಇತಿಹಾಸದಲ್ಲಿ ಪರಿಣಿತರು. ಮುನಿಸ್ವಾಮಿ ರೆಡ್ಡಿ ಹಾಗೂ ತಿಮ್ಮಕ್ಕ ದಂಪತಿಗಳ ಮಗನಾಗಿ ಬೆಂಗಳೂರಿನ ಅನೇಕಲ್ ತಾಲೂಕಿನ ವಣಕನಹಳ್ಳಿ ಅವರು 1948ರ ಮೇ 10ರಂದು ಜನಿಸಿದರು. 1971ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದ ಅವರು 1993 ರಲ್ಲಿ ತಲಕಾಡಿನ ಗಂಗರ ದೇವಾಲಯಗಳು  ಒಂದು ಅಧ್ಯಯನ ಎಂಬ ವಿಷಯದ ಕುರಿತು ಪಿ.ಎಚ್.ಡಿ ಪದವಿ ಪಡೆದರು. ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ ಅವರು, ನಂತರ ಹಂಪಿ ...

READ MORE

Related Books