ಲೋಚನ ಲೇಖನಸೂಚಿ

Author : ಪಿ.ವಿ.ಕೃಷ್ಣಮೂರ್ತಿ

Pages 70

₹ 15.00




Year of Publication: 1999
Published by: ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ
Address: ಎನ್.ಆರ್ .ಕಾಲೋನಿ, ಬೆಂಗಳೂರು-560 019

Synopsys

ಲೋಚನ ಲೇಖನಸೂಚಿ ಕೃತಿಯು ದ್ವಿಶತಮಾನೋತ್ಸವದ ಗ್ರಂಥ ಮಾಲೆಯಾಗಿದ್ದು, ಪಿ.ವಿ.ಕೃಷ್ಣಮೂರ್ತಿ ಹಾಗೂ ನಾ.ಗೀತಾಚಾರ್‍ಯ ಅವರು ಸಂಪಾದಿಸಿರುವ ಕೃತಿಯಾಗಿದೆ. ಜೂನ್ 1987ರಿಂದ ಡಿಸೆಂಬರ್ 1997ರವೆರೆಗಿನ 30 ಸಂಚಿಕೆಗಳನ್ನು ಈ ಕೃತಿಯು ಹೊಂದಿದೆ. ಈ ಕೃತಿಗೆ ಎನ್ ಬಸವಾರಾಧ್ಯ ಅವರು ಮುನ್ನುಡಿ ಬರೆದಿದ್ದು,'ಲೋಚನ' 1983ರಲ್ಲಿ ಪ್ರಾರಂಭವಾದ ವಿದ್ಯತ್ ಪತ್ರಿಕೆ. ಪ್ರತಿಷ್ಠಾನದ ಸಂಸ್ಥಾಪಕ ಎಂ.ಎ. ಸೀತಾರಾಮಯ್ಯ ನವರ ದೂರದೃಷ್ಟಿಯ ಫಲ. ಯಶಸ್ವೀ ಹದಿನೈದು ವರ್ಷಗಳನ್ನು ಪೂರೈಸಿ ನಾಡಿನ ವಿದ್ಯಾಂಸರಿಗೆ ವೇದಿಕೆಯಾಗಿ, ಮೌಲಿಕ ಚರ್ಚೆಗಳಿಗೆ ಕಾರಣವಾಗಿ ಹೊಸ ಇತಿಹಾಸದ ಆಕರಗಳನ್ನು ಸಾಹಿತ್ಯ ಲೋಕಕ್ಕೆ ನೀಡಿ ತನ್ನ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಇಂದಿಗೂ ಕರ್ನಾಟಕದಲ್ಲಿ 'ನಿಯತವಾಗಿ ಪ್ರಕಟವಾಗುತ್ತಿರುವ ಏಕೈಕ ವಿದ್ವತ್ ಪತ್ರಿಕೆ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹದಿನೈದು ವರ್ಷಗಳಲ್ಲಿ ಈ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನಗಳು ಮತ್ತು ಇತರ ಮಾಹಿತಿಗಳನ್ನು ಒಳಗೊಂಡ ಈ ಪುಸ್ತಕ ಸಾಹಿತ್ಯ ಮತ್ತು ಸಂಶೋಧನಾಸಕ್ತರಿಗೆ ಉಪಯುಕ್ತವಾಗಿದೆ’ ಎಂದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಮುನ್ನುಡಿ, ಸಂಪಾದಕೀಯ, ಲೇಖಕ-ಲೇಖನ ಸೂಚಿ, ಗ್ರಂಥ ವಿಮರ್ಶೆ ಸೂಚಿ, ಸಮಸ್ಯಾಪೂರಣ ಲೇಖನ ಸೂಚಿ, ವಸ್ತು ಸಂಗ್ರಹಗಳ ಟಿಪ್ಪಣಿ ಸೂಚಿ,ಅನುಬಂಧಗಳು ಹೀಗೆ ಅನೇಕ ಶೀರ್ಷಿಕಗಳಲ್ಲಿ ಮಾಹಿತಿಗಳಿವೆ

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books