ಲೋಕಾಯತ (ಚಾರ್ವಾಕ ದರ್ಶನ)

Author : ಗೌರೀಶ ಕಾಯ್ಕಿಣಿ

Pages 116

₹ 41.00




Year of Publication: 2005
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಚಾರ್ವಾಕ ಭಾರತದಲ್ಲಿ ಬೆಳೆದ ಪ್ರಾಚೀನ ಸಿದ್ಧಾಂತಗಳ ಪೈಕಿ ಚಾರ್ವಾಕರ ದರ್ಶನವೂ ಒಂದು. ಅದನ್ನೇ ಲೋಕಾಯತ ಎಂದೂ ಕರೆಯುತ್ತಾರೆ. ಮೂಲಗ್ರಂಥಗಳು ಲಭ್ಯವಿಲ್ಲ. ಆದರೂ, ಮಾಧವಾಚಾರ್ಯ ಎಂಬ ತತ್ವಶಾಸ್ತ್ರಜ್ಞನ ‘ಸರ್ವ ದರ್ಶನ ಸಂಗ್ರಹ’ ಕೃತಿಯಲ್ಲಿ ( 13-14ನೇ ಶತಮಾನ) ಚಾರ್ವಾಕರ ದರ್ಶನದ ಬಗ್ಗೆ ಉಲ್ಲೇಖವಿದೆ. ಹಿಂದೂ ಧರ್ಮ ಗ್ರಂಥಗಳಲ್ಲಿಯ ‘ಪ್ರತ್ಯಕ್ಷ ಪ್ರಮಾಣ' ಒಂದನ್ನು ಮಾತ್ರ ಚಾರ್ವಾಕಮತ ಅಂಗೀಕರಿಸುತ್ತದೆ. ಈ ಬಗ್ಗೆ ಕೃತಿಯಲ್ಲಿ ಚರ್ಚಿಸಲಾಗಿದೆ. ಈ ಕೃತಿಗೆ ‘ಉಗ್ರಾಣ ಪ್ರಶಸ್ತಿ’ (1999) ಲಭಿಸಿದೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books