ಲೋಕದ ಕಣ್ಣು

Author : ಕೆ.ಎಸ್. ಚೈತ್ರಾ

Pages 116

₹ 90.00




Year of Publication: 2021
Published by: ಸ್ನೇಹಾ ಎಂಟರ್ಪ್ರೈಸಸ್
Address: ನಂ.138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ಡಾ.ಕೆ.ಎಸ್.ಚೈತ್ರಾ ಅವರ ಬರಹಗಳ ಸಂಗ್ರಹ ‘ಲೋಕದ ಕಣ್ಣು’. ಈ ಕೃತಿಗೆ ಡಾ. ಆರ್. ಪೂರ್ಣಿಮಾ ಅವರು ನಲ್ನುಡಿಗಳನ್ನು ಬರೆದಿದ್ದಾರೆ. ‘ಭೂಮಿ ಎಂದರೆ ಹೆಣ್ಣು... ಆದರೆ ಭೂಮಿಯ ಮೇಲೆ ಹೆಣ್ಣಿನ ಹೆಜ್ಜೆಗುರುತುಗಳನ್ನು ಹುಡುಕುತ್ತಾ ಹೋದಷ್ಟೂ ಅವು ಅಸ್ಪಷ್ಟ. ಹಾಗೆ ಎಲ್ಲ ದೇಶಗಳ ಇತಿಹಾಸವೂ ಪೌರುಷಮಯ ‘ಹಿಸ್ಟರಿ’ ಅಥವಾ ‘ಹಿಸ್ ಸ್ಟೋರಿ’ ಯೇ ಹೊರತು ಅದರಲ್ಲಿ ‘ಹರ್ ಸ್ಟೋರಿ’ ಗಳನ್ನು ಹುಡುಕುವುದು ಕಷ್ಟ. ಆದರೆ ಇಂಥ ಹುಡುಕಾಟವೇ ಎಲ್ಲರೂ ಎಲ್ಲ ನೆಲೆಗಳಲ್ಲೂ ಮಾಡಲೇಬೇಕಾದ ಕಷ್ಟದ ಕೆಲಸ. “ದೇಶ ಸುತ್ತು ಕೋಶ ಓದು” ಎನ್ನುವ ಚಂದದ ಮಾತು ಎಲ್ಲರಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಅನ್ವಯಿಸುವುದು ಅಪರೂಪ. ಆದರೆ ಅಂಥ ಅಪೂರ್ವ ಅವಕಾಶ ಪಡೆದ ಡಾ. ಕೆ.ಎಸ್. ಚೈತ್ರಾ ಅದನ್ನು ಈ ಹುಡುಕಾಟದ ಕೆಲಸಕ್ಕೂ ಬದ್ಧತೆಯಿಂದ ಬಳಸಿಕೊಳ್ಳುವ ಬಗೆಯೇ ಅದ್ಭುತ. ಲೋಕ ಸುತ್ತಲು ಹೊರಟ ಅವರಿಗೆ ಹೆಣ್ಣಿನ ಅಸ್ಪಷ್ಟ ಹೆಜ್ಜೆಗುರುತುಗಳೇ ವಿಶಿಷ್ಟವಾಗಿ ಕಂಡು, ಅವು ಕೂಡ “ಲೋಕದ ಕಣ್ಣು” ಎಂಬ ಸತ್ಯ ಹಲವು ಬಗೆಯಲ್ಲಿ ಅರಿವಿಗೆ ಬಂದವು. ಅವುಗಳನ್ನು ಹುಡುಕುತ್ತ, ವಿಶ್ಲೇಷಿಸುತ್ತ ಅವರು ಬರೆದ ಪ್ರವಾಸ ಕಥನ, ಇತಿಹಾಸದಲ್ಲಿ ಹೆಣ್ಣಿನ ಪಾಲಿನ ಪ್ರಯಾಸ ಕಥನದ ನಿರೂಪಣೆಯೂ ಆಯಿತು. ಈ ಲೋಕಸತ್ಯ ಕುರಿತ ಇಂಥ ಹೆಣ್ಣೋಟದ ದೇಶಕೋಶ ವಿಶೇಷ ಶೋಧ- ನನಗೆ ತಿಳಿದಂತೆ ಕನ್ನಡದ ಮಟ್ಟಿಗಂತೂ ಹೊಸತು! “ಕೆರೆಗೆ ಹಾರ” ಕಥೆ ಕೇಳಿಕೊಂಡು ಬೆಳೆದ ನಮಗೆಲ್ಲ ಈ ಹೆಣ್ಣುಗಳ ಬದುಕು ಪರಿಚಿತವೇ. ಆದರೆ ಅಂಥವರನ್ನು ಹುಡುಕಿ ಡಾ. ಚೈತ್ರಾ ಪರಿಚಯಿಸುವ ವಿನೂತನ ರೀತಿಯೇ ಅವರನ್ನೆಲ್ಲ ನಮ್ಮ ಮನದಂಗಳದ ಹುಡುಗಿಯರನ್ನಾಗಿ ಮಾಡಿಬಿಡುತ್ತದೆ. ದೇಶವಿದೇಶಗಳ ಪ್ರವಾಸ ಎನ್ನುವುದು ಮನರಂಜನೆ, ಮನೋಲ್ಲಾಸಗಳ ಜೊತೆ ಹೀಗೆ ಇತಿಹಾಸದ ಇಂಥ ಕಿರುಓಣಿಗಳಲ್ಲಿ ನಡೆಸುವ ಸುತ್ತಾಟವೂ ಆಗಬಹುದು ಎಂಬುದನ್ನು ಡಾ. ಚೈತ್ರಾ ಅವರಿಗೇ ಅನನ್ಯವಾದ ರೀತಿಯಲ್ಲಿ ತೋರಿಸಿಕೊಟ್ಟಿದ್ದಾರೆ ’ ಎಂದಿದ್ದಾರೆ.

About the Author

ಕೆ.ಎಸ್. ಚೈತ್ರಾ

ಉದಯೋನ್ಮುಖ ಬರಹಗಾರ್ತಿಯಾದ ಚೈತ್ರಾ ಕೆ.ಎಸ್ ಅವರು ಹುಟ್ಟಿದ್ದು 1974 ಜೂನ್ 27. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಅವರು ವೈದ್ಯ ಸಾಹಿತ್ಯ ರಚನೆಗಳಲ್ಲಿ ಹೆಸರಾದವರು. ವ್ಯಕ್ತಿತ್ವ ವಿಕಸನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ವಿದ್ಯಾರ್ಥಿಯಾಗಿದ್ದನಿಂದಲೆ ತಮ್ಮ ಒಲವನ್ನು ಸಾಹಿತ್ಯದೆಡೆ ಕಂಡುಕೊಂಡವರು ಸಮಗ್ರ ಸಾಧನೆಗಾಗಿ ಅಂತರರಾಷ್ಷ್ರೀಯ ಅತ್ಯತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನ ಕೃತಿಗಳು.  ಉದಯೋನ್ಮುಖ ಬರಹಗಾರ ಪ್ರಶಸ್ತಿ, 'ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ದತ್ತಿನಿಧಿ ಬಹುಮಾನ. ಶಿವಮೊಗ್ಗೆಯ ನಾವಿಕ ಪತ್ರಿಕೆಗೆ “ಅಮೇರಿಕಾ ಪತ್ರ” ಮಹಿಳಾ ...

READ MORE

Awards & Recognitions

Related Books