ಲೋಕಸೇವಾನಿರತ ಎಂ.ಎಸ್.‌ ದ್ಯಾವೇಗೌಡ

Author : ಎಚ್.ಎಂ. ರವಿಕಾಂತ್

Pages 152

₹ 160.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಅದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲೂಕು, ಮಂಡ್ಯ-571448.

Synopsys

`ಲೋಕಸೇವಾನಿರತ ಎಂ.ಎಸ್.‌ ದ್ಯಾವೇಗೌಡ' ಕೃತಿಯನ್ನು ಲೇಖಕ ಎಚ್.ಎಂ ರವಿಕಾಂತ್‌ ಅವರು ರಚಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ, ಮಾಕೋನಹಳ್ಳಿ ಎಂ.ಎಸ್. ದ್ಯಾವೇಗೌಡರದು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಮೈಸೂರು ರಾಜ್ಯದಲ್ಲಿ ಜನಜನಿತವಾದ ಹೆಸರು, ಅವರ ಸಾಧನೆ, ಕ್ರಿಯಾಶೀಲತೆ, ಮಾನವೀಯ ನಡವಳಿಕೆ, ದಾನಗುಣ, ಉದ್ಯಮಶೀಲತೆ,  ಒಳ್ಳೆಯತನಗಳು ಲೋಕ ವಿಖ್ಯಾತಿ ಪಡೆದಿವೆ. ನೊಂದವರ ಕಷ್ಟಕ್ಕೆ ಮರುಗುವ ಹೃದಯವಂತಿಕೆ ಬಹುತೇಕ ಹಣವಂತರಲ್ಲಿ ಕಾಣುವುದಿಲ್ಲ. ಆದರೆ, ಇದಕ್ಕೆ ಅಪವಾದದಂತಿದ್ದ ದ್ಯಾವೇಗೌಡರು ಸತತ ಪರಿಶ್ರಮ ಮತ್ತು ಕ್ರಿಯಾಶೀಲತೆಯ ಮೂಲಕ ಗಳಿಸಿದ್ದನ್ನು ಜನರಿಗೆ ಹಂಚಿ, ಊರಿಗೆ, ನಾಡಿಗೆ ಬೇಕಾದ ಅಗತ್ಯಗಳನ್ನು ಒದಗಿಸಲು ವ್ಯಯಿಸಿದ್ದು 'ಲೋಕಸೇವಾ ನಿರತ' ಪ್ರಶಸ್ತಿಯನ್ನು ಅವರ ಮಡಿಲಿಗೆ ತಂದು ಹಾಕಿತು. ಬಹುಮುಖ ಆಸಕ್ತಿ ಮತ್ತು ಶೋಧನ ಪ್ರವೃತ್ತಿಯಿಂದ ಅನೇಕ ಸಾಹಸಗಳನ್ನು ಮಾಡಿ ಯಶಸ್ಸು ಕಂಡವರು. ನೂರು ವರ್ಷಗಳ ಹಿಂದಿನ ಮಲೆನಾಡು ಒಂದು ಕಗ್ಗಾಡು, ಏನೇನು ಸೌಲಭ್ಯಗಳಿಲ್ಲದ ಮನುಷ್ಯವಾಸಕ್ಕೆ ಸವಾಲಾದ ಭೂಮಿ, ಆದರೆ ದ್ಯಾವೇಗೌಡರು ಸವಾಲು ಗಳನ್ನೇ ಅವಕಾಶ ಮಾಡಿಕೊಂಡು ಕಾಫಿ, ಸಾಲಿಗೆ, ಟೀ, ಮುಂತಾದ ಉದ್ಯಮ ಬೆಳೆಸಿ ಸಾವಿರಾರು ಜನಕ್ಕೆ ಬದುಕಿನ ಬಾಗಿಲು ತೆರೆದವರು. ಇವರ ಸಾಹಸ ಯಾತ್ರೆಯನ್ನು ಶ್ರೀ ಎಚ್.ಎಂ. ರವಿಕಾಂತ್ ಆಕರ್ಷಕವಾಗಿ ಕಟ್ಟಿಕೊಡುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ ಎಂದು ವಿವರಿಸಲಾಗಿದೆ.

About the Author

ಎಚ್.ಎಂ. ರವಿಕಾಂತ್

ಲೇಖಕ ಎಚ್.ಎಂ. ರವಿಕಾಂತ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದವರು. ತಾಯಿ ಹೊಸಮನೆ ನಾಗಮ್ಮ, ತಂದೆ ಹೆಚ್.ವಿ. ಮಾನಪ್ಪನಾಯ್ಕರ. ಸಾಮಾನ್ಯ ಕೃಷಿಕ ಕುಟುಂಬದವರು. ಬಿ.ಕಾಂ, ಪದವೀಧರ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದು, ಕೊಪ್ಪದಲ್ಲಿ 'ಕವಿಶೈಲ' ಪತ್ರಿಕೆಯ ಸಂಪಾದಕರಾಗಿದ್ದಾರೆ. ನಿತ್ಯ ಸಹ್ಯಾದ್ರಿ' ಎನ್ನುವ ದಿನಪತ್ರಿಕೆ ಆರಂಭಿಸಿದ್ದಾರೆ. ಎರಡು ಅವಧಿಗೆ ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಹಿರೇಕೊಡಿಗೆಯಲ್ಲಿ ಕುವೆಂಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಅಕ್ಷರ ಪ್ರಾಥಮಿಕ ಶಾಲೆ ಸ್ಥಾಪಿಸಿದ್ದಾರೆ. ಹಿರೇಕೊಡಿಗೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರವು ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ...

READ MORE

Related Books