ಲೂಯಿ ಬ್ರೈಲ್

Author : ಎಂ.ಎಸ್.ಎಸ್. ಮೂರ್ತಿ

₹ 100.00




Year of Publication: 2021
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: ಬೆಂಗಳೂರು
Phone: 9739561334

Synopsys

ಲೇಖಕ ಎಂ.ಎಸ್ ಎಸ್ ಮೂರ್ತಿ ಅವರ ‘ಲೂಯಿ ಬ್ರೈಲ್’ ಕೃತಿಯು ಲೂಯಿ ಬ್ರೈಲ್ ಅವರ ಜೀವನ ಕಥನವಾಗಿದೆ. ತಾನು ಒಬ್ಬ ಅಂಧನಾಗಿ, ಇಡೀ ಜಗತ್ತಿನ ಅಂಧರಿಗೆ ಬ್ರೈಲ್ ಲಿಪಿಯನ್ನು ಕಂಡು ಹಿಡಿಯುವುದರ ಮೂಲಕ ಅವರ ಬದುಕಿಗೆ ಜ್ಞಾನದ ಬಾಗಿಲನ್ನು ತೆರೆದಂತಹ ಮಹಾನ್ ಚೇತನ ಲೂಯಿ ಬ್ರೈಲ್. ಇಂದು ಅಂಧರು ಕೂಡ ಓದಲು ಬರೆಯಲು ಸಾಧ್ಯವಾಗುವಂತಹ ಬ್ರೈಲ್ ಲಿಪಿಯನ್ನು ರೂಪಿಸಿಕೊಟ್ಟ ಮಹಾನ್ ವ್ಯಕ್ತಿಯ ಜೀವನ ಕಥನದ ಕೃತಿ ಇದು. ನಾಡಿನ ಹಿರಿಯ ವಿಜ್ಞಾನಿಗಳು ಹಾಗೂ ಲೇಖಕರು ಆದಂತಹ ಎಂ ಎಸ್ ಎಸ್ ಮೂರ್ತಿ ಅವರು 200 ವರ್ಷಗಳ ಹಿಂದಿನ ಆತನ ಹೋರಾಟದ ಬದುಕನ್ನು ಈ ಕೃತಿಯ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

About the Author

ಎಂ.ಎಸ್.ಎಸ್. ಮೂರ್ತಿ
(16 August 1929 - 18 December 2012)

ವಿಜ್ಞಾನಿ ಎಂ.ಎಸ್.ಎಸ್. ಮೂರ್ತಿ ಅವರು 16-08-1929ರಂದು ಜನಿಸಿದ ಲೇಖಕರು ಸಹ.ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ  40 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು. ರೇಡಿಯೇಶನ್ ಬಯೋಫಿಜಿಕ್ಸ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಕ್ಯಾನ್ಸರ್‍ ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಕಿರಣಗಳು ಹಾಗೂ ಅನುಸರಿಬೇಕಾದ ಸುರಕ್ಷತಾ ನೀತಿಗಳ ಅಧ್ಯಯನ ಇವರ ವಿಶೇಷತೆ. ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದು, ವೈಜ್ಞಾನಿಕ ವಿಷಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕ್ಯಾನ್ಸರ್, ಖಗೋಳ ವಿಜ್ಞಾನ, ಮಲೇರಿಯಾ, ಪರಮಾಣು, ತಳಿ ವಿಜ್ಞಾನ, ಕಾಲರಾ ವಿಷಯಗಳು ಕುರಿತದ್ದಾಗಿವೆ.  ಕೃತಿಗಳು: ಆರೋಗ್ಯದ ಅಂಗಳದಲ್ಲಿ ವೈಜ್ಞಾನಿಕ ಪ್ರಗತಿ (ವೈದ್ಯಕೀಯ ಲೇಖನಗಳ ...

READ MORE

Related Books