ಲಖನೌ ಡೈರಿ

Author : ಚಂದ್ರಶೇಖರ್ ಆಲೂರು

Pages 100

₹ 80.00




Year of Publication: 2014
Published by: ಅನ್ನಪೂರ್ಣ ಪ್ರಕಾಶನ
Address: ಸಿರುಗುಪ್ಪ ತಾಲ್ಲೂಕು, ಸಿರಿಗೇರಿ, ಬಳ್ಳಾರಿ ಜಿಲ್ಲೆ- 583120
Phone: 9449834166

Synopsys

ಲೇಖಕ ಚಂದ್ರಶೇಖರ ಆಲೂರು ಅವರ ಪ್ರವಾಸ ಕಥನ ‘ಲಖನೌ ಡೈರಿ’. ಈ ಕೃತಿಯಲ್ಲಿ 19 ಪ್ರವಾಸ ಕಥನಗಳ ಜೊತೆಗೆ ‘ಮಲಯಾಳದಲ್ಲಿ ಮೂರು ದಿನ’ ಎಂಬ ಶೀರ್ಷಿಕೆಯಡಿ 3 ಬರಹಗಳಿವೆ. ಲೇಖಕರೇ ಹೇಳುವಂತೆ ‘ಲಖನೌ ಡೈರಿ’ ಒಂಥರಾ ಪ್ರವಾಸ ಕಥನ. ಕಾರ್ಯ ನಿಮಿತ್ತ ಎರಡು ಸಲ ಲಖನೌಗೆ ಹೋಗಿ ಎಂಟು ದಿನ ತಂಗಿದ್ದೆ. ಅದನ್ನು ಕೇಂದ್ರವಾಗಿರಿಸಿಕೊಂಡು ದೂರದ ಕಾಶಿ, ಅಲಹಾಬಾದ್, ಪ್ರಯಾಗ; ಸನಿಹದ ಅಯೋಧ್ಯೆ, ನೈಮಿಷಾರಣ್ಯ ಮುಂತಾದ ಸ್ಥಳಗಳಿಗೆ ಸ್ನೇಹಿತರೊಂದಿಗೆ ಪ್ರವಾಸ ಮಾಡಿದ ನೆನಪುಗಳು ಇಲ್ಲಿವೆ. ಭಾರತದ ರಾಜಕಾರಣ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ತನ್ನದೇ ಆದ ವಿಶಿಷ್ಟ ಬಗೆಯಲ್ಲಿ ಪ್ರಭಾವಿಸಿದ ಲಖನೌ ನಗರವನ್ನು ನಾನು ಅತ್ಯಲ್ಪ ಸಮಯದಲ್ಲಿ ಮತ್ತು ಓಡಾಟದಲ್ಲಿ ಗ್ರಹಿಸಿದ ಬಗೆ ಇಲ್ಲಿದೆ’ ಎಂದಿದ್ದಾರೆ.

About the Author

ಚಂದ್ರಶೇಖರ್ ಆಲೂರು

ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು. ತಂದೆ ಶ್ರೀ ಎ.ಎಚ್.ಲಿಂಗಯ್ಯ, ತಾಯಿ ಶ್ರೀಮತಿ ಅಂಕಮ್ಮ. ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್‌ ಆಗಿದ್ದರಿಂದ ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸ. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. 1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟ. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ. 2000ದಲ್ಲಿ ಅಮೆರಿಕಾ ...

READ MORE

Related Books