ಲುಂಡೀರಿಯಾ

Author : ಉದಯ್ ಕುಮಾರ್ ಹಬ್ಬು

Pages 64

₹ 60.00




Year of Publication: 2018
Published by: ಆಕೃತಿ ಬುಕ್ಸ್
Address: ನಂ.31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010
Phone: 08023409479

Synopsys

‘ಲುಂಡೀರಿಯಾ’ ಉದಯಕುಮಾರ್ ಹಬ್ಬು ಅವರು ಪ್ರವಾಸದ ಮಾದರಿಯಲ್ಲಿ ಬರೆದ ಕಾಲ್ಪನಿಕ ಕಾದಂಬರಿ. ಧೈರ್ಯ ಮತ್ತು ಕರುಣೆಯ ಆನ್ಯಲೋಕಕ್ಕೆ ಎಂಬ ಉಪಶೀರ್ಷಿಕೆಯಡಿ ತಮ್ಮ ಕಲ್ಪನೆಗಳನ್ನು ದಾಖಲಿಸಿದ್ದಾರೆ. ಸಂಶೋಧನೆ ಮತ್ತು ಧೈರ್ಯದ ಈ ಕಥೆಯಲ್ಲಿ ಭೂಮಿಯ ಇಬ್ಬರು ಮಕ್ಕಳು ಎದ್ದೇಳುವಾಗ ಅವರು ತಮ್ಮ ಮನೆಯ ಹಾಸಿಗೆಯಲ್ಲಿರದೆ ದೊಡ್ಡ ಬಂಡೆಗಲ್ಲುಗಳ ನಡುವೆ ಇರುವ ಜ್ವಾಲಾಮುಖಿಗುಂಡಿ ಲುಂಡೇರಿಯಾ ಎಂಬ ಅನ್ಯಲೋಕದಲ್ಲಿ ಎದ್ದೇಳುತ್ತಾರೆ. ವಿಸ್ಮಯ ಮತ್ತು ಭಯಭರಿತ ಮಕ್ಕಳು ನೋಡಿದೆಡೆಯಲ್ಲಿ ಪ್ರಾಣಿಗಳನ್ನು ಕಾಣುತ್ತಾರೆ. ಅವುಗಳೂ ಕೂಡಾ ಈ ಮಕ್ಕಳನ್ನು ವಿಸ್ಮಯದಿಂದ ದಿಟ್ಟಿಸಿ ನೋಡುತ್ತಿವೆ. ಆದರೆ ಪ್ರಜ್ವಲ್ ಮತ್ತು ನೇಹಾರಿಗೆ ಇದು ಪ್ರಾರಂಭ ಮಾತ್ರ. ಅವರು ನೋಡುತ್ತಿರುವಂತೆ ಪ್ರಾಣಿಗಳು ಮಾತಾಡಲು ಪ್ರಾರಂಭಿಸಿದವು. ಅದುವೇ ಮಕ್ಕಳಿಗೆ ನಂಬಲಸಾಧ್ಯವಾಯಿತು.

ಭೂಮಿ ಮತ್ತು ಲುಂಡೀರಿಯಾ ತುಂಬ ಹೋಲಿಕೆಗಳಿರುವ ಜಗತ್ತುಗಳೆಂದು ಕಂಡು ಬಂದರೂ. ಅವುಗಳಲ್ಲಿ ಎರಡು ದೊಡ್ಡ ವ್ಯತ್ಯಾಸಗಳಿದ್ದವು. ಲುಂಡೀರಿಯಾದಲ್ಲಿ ಮನುಷ್ಯರಿರಲಿಲ್ಲ ಮತ್ತು ಎಲ್ಲ ಪ್ರಾಣಿಗಳೂ ಶಾಂತಿಯಿಂದ ಸೌಹಾರ್ದತೆಯಿಂದ ಪರಸ್ಪರ ಸಹಕಾರಿಯಾಗಿದ್ದವು. ಪ್ರಜ್ವಲ್ ಮತ್ತು ಲುಂಡೀರಿಯಾದಲ್ಲಿ ಯಾವ ಪ್ರಾಣಿಯೂ ಇನ್ನೊಂದು ಪ್ರಾಣಿಯನ್ನು ತಿನ್ನುವುದಿಲ್ಲ ಎಂದು ಕಲಿಯಲಿದ್ದಾರೆ. ಆಹಾರ ಸೇವನೆ ಅವರವರ ಆಯ್ಕೆ. ಆದರೆ ಮಾಂಸಾಹಾರ ನಮ್ಮ ದೇಹಕ್ಕೆ ಒಗ್ಗದು ಎಂದು ಹಲವಾರು ವಿಜ್ಞಾನಿಗಳು ಹೇಳಿದ್ದಾರೆ. ಈ ಪುಸ್ತಕವು ಕೇವಲ ಸಸ್ಯಾಹಾರದ ಮಹತ್ವ ಮತ್ತು ಅಗತ್ಯವನ್ನು ಹೇಳುವುದೆ ವಿನಃ ಮಾಂಸಾಹಾರವನ್ನು ತಿರಸ್ಕರಿಸುವುದಿಲ್ಲ. ಅನಿವಾರ್ಯವಾದಾಗ ಬದುಕುಳಿಯಲು ಮಾಂಸಾಹಾರವು ಒಂದು ಅಗತ್ಯ ಮತ್ತು ಅನಿವಾರ್ಯ ಎಂಬ ಸಂದೇಶವೂ ನೀಡುತ್ತದೆ. 

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books