ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ

Author : ಮೀನಗುಂಡಿ ಸುಬ್ರಮಣ್ಯ

Pages 288

₹ 225.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 0802220358001

Synopsys

ಮಾನಸಿಕ ಸಮಸ್ಯೆಗಳಿಗೆ ಮನಸ್ಸೇ ಮೂಲ. ಬಹುತೇಕ ದೈಹಿಕ ಸಮಸ್ಯೆಗಳಿಗೂ ಮನಸ್ಯೇ ಮೂಲವಾಗಿರುತ್ತದೆ. ಮನಸ್ಸುಮತ್ತು ದೇಹ ಮಧ್ಯೆ ಅನ್ಯೋನ್ಯ ಸಂಬಂಧವಿರುತ್ತದೆ. ಆದ್ದರಿಂದ, ಮನಸ್ಸಿನ ಸಮಸ್ಯೆಗಳಿಗೆ ನಮ್ಮಲ್ಲಿಯೇ ಮಾರ್ಗ ಉಂಟು. ಈ ಸಮಸ್ಯೆಗಳನ್ನು ಎದುರಿಸುವುದು ಅವರವರ ವ್ಯಕ್ತಿತ್ವವನ್ನು ಅವಲಂಬಿಸುತ್ತದೆ. ಸಮಸ್ಯೆಯನ್ನು ಸ್ವೀಕರಿಸುವ ಮನೋಭಾವವೂ ಸಮಸ್ಯೆ ಉಲ್ಬಣಕ್ಕೆ ಕಾರಣ. ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಅದು ಸಮಸ್ಯೆಯಾಗಿಯೇ ಉಳಿಯದು. ಇಂತಹ ಅಂಶಗಳ ಬಗ್ಗೆ ಈ ಕೃತಿ ವಿವರವಾಗಿ ಚರ್ಚಿಸುತ್ತದೆ. ಮಾನಸಿಕ ಸದೃಢತೆ ಸಾಧಿಸಿಕೊಳ್ಳಲು ಈ ಕೃತಿ ಸಹಕಾರಿಯಾಗಿದೆ. ಈ ಕೃತಿಗೆ ‘ವರ್ಧಮಾನ ಪ್ರಶಸ್ತಿ’ (1993) ಪ್ರಶಸ್ತಿ ದೊರೆತಿದೆ.

About the Author

ಮೀನಗುಂಡಿ ಸುಬ್ರಮಣ್ಯ

ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ ಮನೋವಿಜ್ಞಾನದ ಲೇಖನ ವಲಯದಲ್ಲಿ ಚಿರಪರಿಚಿತ ಹೆಸರು. (ಜನನ 1943) ಬಳ್ಳಾರಿಯ ತಾರಾನಾಥ ಆಯರ್ವೇದ ವಿದ್ಯಾಪೀಠದಲ್ಲಿ ಎಲ್.ಎ.ಎಂ.ಎಸ್.ಶಿಕ್ಷಣ ಪೂರೈಸಿ, ಸೈಕೋಥೆರಪಿ (1975) ರಂಗ ಪ್ರವೇಶಿಸಿದರು. ನಂತರ, ಕೊಚ್ಚಿನ್'ನ ಇನ್ಸ್ ಸ್ಟಿಟ್ಯೂಟ್ ಫಾರ್ ಕೌನ್ಸೆಲಿಂಗ್ ಆಂಡ್ ಟ್ರ್ಯಾನ್ಸ್ಯಾಕ್ಯನಲ್ ಅನಾಲಿಸಿಸ್ ರೆವರೆಂಡ್ ಫಾದರ್ ಜಾರ್ಜ್ ಕಂಡತಿಲ್ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯಾ ಸಿ.ಎಂ. ಅವರಿಂದ ಟ್ರಾನ್ಯಾಕನಲ್ ಅನಾಲಿಸಿಸ್, ಗ್ರೂಪ್ ಡೈನಾಮಿಕ್ಸ್, ಗೆಸ್ಟಾಲ್ಟ್ ಥೆರಪಿ ಮತ್ತು ನಾನ್ ಡೈರೆಕ್ಟಿವ್ ಕೌನ್ಸೆಲಿಂಗ್ ನಲ್ಲಿ ತರಬೇತಿ ಪಡೆದರು. ಮಾನಸಿಕ ವಿಜ್ಞಾನದಲ್ಲಿ ರೋಗ ವಿಶ್ಲೇಷಣೆಯ ಪದ್ಧತಿ ಬೆಳೆದು ಬಂದು, ಹಲವಾರು ಶಿಬಿರಗಳನ್ನು ನಡೆಸಿದರು.  ಮೀನಗುಂಡಿಯವರು ಮನಸ್ಸು ಇಲ್ಲದ ...

READ MORE

Related Books