ಮಾನವ ಪ್ರವೃತ್ತಿ ಮತ್ತು ಮೌಲ್ಯಗಳು

Author : ಪಾ.ವೆಂ. ಆಚಾರ್ಯ

Pages 28

₹ 3.00




Year of Publication: 1980
Published by: ಸರಸ್ವತಿ ಏಜೆನ್ಸೀಜ್
Address: ಮಿಷನ್ ಆಸ್ಪತ್ರೆಯ ದಕ್ಷಿಣಕ್ಕೆ, ಉಡುಪಿ-576101.

Synopsys

ಮಾನವ ಪ್ರವೃತ್ತಿ ಮತ್ತು ಮೌಲ್ಯಗಳು-ಲೇಖಕ ಪಾ.ವೆಂ. ಆಚಾರ್ಯರ ಕೃತಿ. ಮನುಷ್ಯನ ಮೂಲಪ್ರವೃತ್ತಿಗಳು ವ್ಯಕ್ತಿಗತವಾಗಿ ಹಾಗೂ ಸಾಮಾಜಿಕವಾಗಿ ಅಪಾಯಕಾರಿಯಾಗಬಾರದು ಎಂಬ ಆಶಯದೊಂದಿಗೆ ಅಧ್ಯಯನದ ಉತ್ತಮ ಮಾಹಿತಿಯ ಸರಕು ಒದಗಿಸುತ್ತದೆ. 

ಪ್ರವೃತ್ತಿ ಹಾಗೂ ಮೌಲ್ಯಗಳು ಬೇರೆ ಬೇರೆ. ಪ್ರವೃತ್ತಿಗಳ ಬದಲಾವಣೆ ತುಂಬಾ ಕಷ್ಟದಾಯಕ. ಮೂಲ ಪ್ರವೃತ್ತಿಗಳು ಮನುಷ್ಯನಿಗೂ ಪಶುಗಳಿಗೂ ಸಮಾನ. ಆದರೆ, ಸಾಂಸ್ಕೃತಿಕ ಪ್ರಾಣಿಯಾದ ಮನುಷ್ಯನಿಗೆ ಇವುಗಳನ್ನು ಮೀರಿ ವರ್ತಿಸುವ ಅಗತ್ಯವಿದೆ. ಮೌಲ್ಯಗಳ ಅಳವಡಿಕೆ ಮನುಷ್ಯನಿಗೆ ಅನಿವಾರ್ಯ ಎಂಬುದರ ಆಶಯದೊಂದಿಗೆ ಲೇಖಕರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಪ್ರವೃತ್ತಿ ಹಾಗೂ ಮೌಲ್ಯಗಳ ಸ್ವರೂಪ-ಸ್ವಭಾವ-ಸಾಂದರ್ಭಿಕ ಅರ್ಥಗಳ ಹಿನ್ನೆಲೆಯಲ್ಲಿ ನಡೆದ ತೌಲನಿಕ ಅಧ್ಯಯನವನ್ನೂ ಇಲ್ಲಿ ಕಾಣಬಹುದು.

About the Author

ಪಾ.ವೆಂ. ಆಚಾರ್ಯ
(06 February 1915 - 04 May 1992)

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ...

READ MORE

Related Books