ಮಾನವತಾವಾದಿ ಡಾ.ಅಂಬೇಡ್ಕರ್

Author : ದೇಜಗೌ (ದೇ. ಜವರೇಗೌಡ)

Pages 196

₹ 90.00




Year of Publication: 2015
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

‘ಮಾನವತಾವಾದಿ ಡಾ.ಅಂಬೇಡ್ಕರ್’ ಹಿರಿಯ ಲೇಖಕ ದೇ. ಜವರೇಗೌಡ(ದೇಜಗೌ) ಅವರ ಕೃತಿ. ಇದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ. ಜಗತ್ತಿನ ಮಹಾ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲುವ ನಾಯಕ ಅಂಬೇಡ್ಕರ್ ಅವರ ಬದುಕು ಸಾಧನೆಗಳ ಕುರಿತಾಗಿ ಜನರಿಗಾಗಿ ಅವರು ಮಾಡಿದ ಕಾರ್ಯಗಳ ಕುರಿತಾಗಿ ಈ ಕೃತಿಯಲ್ಲಿ ಮಹತ್ವದ ಮಾಹಿತಿಗಳಿವೆ.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books