ಮಾತಿಲ್ಲ ಗುರುತು ಇದೆ

Author : ಪ್ರವೀಣ್ ಬಿ.ಎಂ



Year of Publication: 2023
Published by: ಸಮಷ್ಠಿ ಪ್ರಕಾಶನ
Address: ಧಾರವಾಡ

Synopsys

`ಮಾತಿಲ್ಲ ಗುರುತು ಇದೆ’ ಕೃತಿಯು ಪ್ರವೀಣ್ ಬಿ.ಎಂ ಅವರ ಕವನಸಂಕಲನವಾಗಿದೆ. ಜೀವಕೆ ಋಣತೃಣಾರುವಪಾತ್ರೆ ಪಾದದಡಿಗೆ, ತಳ್ಳುವರ ಸಾಲು ಸಾಲು ಸರದಿ, ಮುಷ್ಠಿಬಿಗಿಯಲಿಕ್ಕೆ ಏನೂ ಇಲ್ಲ.. ಎಂಬುವ ರೀತಿಯಲ್ಲಿ ಕಾವ್ಯ ಬದುಕಿನ ಶೋಧ ಈ ಕೃತಿಯಲ್ಲಿ ನಡೆಯುತ್ತದೆ. ಮನಸ್ಸನ್ನು ಕಾಡಿದ ವಿಚಾರಗಳನ್ನು ವಸ್ತುಗಳಾಗಿ ಈ ಕೃತಿಯಲ್ಲಿ ಉಪಯೋಗಿಸಿಕೊಂಡಿದ್ದು, ಭಾವನೆಗಳು ಇಲ್ಲಿ ಭಿನ್ನವಾಗಿ ಇಲ್ಲಿ ವ್ಯಕ್ತವಾಗಿದೆ.

About the Author

ಪ್ರವೀಣ್ ಬಿ.ಎಂ
(10 March 1983)

ಲೇಖಕ ಪ್ರವೀಣ್ ಬಿ.ಎಂ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಿಳಸನೂರಿನವರು. 1983 ಮಾರ್ಚ್ 10 ರಂದು ಜನನ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಬುಗುರಿ (ನಿ.ಮೈಮ್ ರಮೇಶ್), ನಿರಾಕರಣ (ನಿ.ಮೈಮ್ ರಮೇಶ್), ಥ್ಯಾಂಕ್ಯೂ ಮಿಸ್ಟರ್ ಗ್ಲಾಡ್ (ನಿ.ಮೈಮ್ ರಮೇಶ್), ಹೆಣದ ಬಟ್ಟೆ (ಪ್ರೇಮಚಂದ್ರ ಕಾದಂಬರಿ ಆಧಾರಿತ, ನಿರ್ದೇಶನ ಜನ್ನಿ), ಜಲಗಾರ (ನಿ. ಕೃಷ್ಣ ಜನಮನ), ಸಾಂಬಶಿವ ಪ್ರಹಸನ(ಡಾ.ಚಂದ್ರಶೇಖರ ಕಂಬಾರ, ನಿ.ಶೇಖ್ ಅಹಮದ್) ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಕೃತಿಗಳು: ನೆಲಮುಟ್ಟದ ಕೂಗು, ನೆಲದ ಹುಣ್ಣು, ಮಾತಿಲ್ಲ ಗುರುತು ಇದೆ ...

READ MORE

Related Books