ಮಾತಿನ ಮಂಟಪ

Author : ಗೌಡಗೆರೆ ಮಾಯುಶ್ರೀ

Pages 144

₹ 120.00




Year of Publication: 2021
Published by: ಜನಮುಖಿ ಪ್ರಕಾಶನ
Address: ಸಂ. ಯು-8, ನೀಲಗಿರಿ ಪಾಪಣ್ಣ ಬಡಾವಣೆ, 6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಶ್ರೀರಾಮಪುರ, ಬೆಂಗಳೂರು- 560021.
Phone: 9972516266

Synopsys

ʼಮಾತಿನ ಮಂಟಪʼ ಪುಸ್ತಕವು ವಿಡಂಬನಾತ್ಮಕ ಹರಟೆಗಳ ಸಂಕಲನವಾಗಿದ್ದು ಲೇಖಕ ಗೌಡಗೆರೆ ಮಾಯುಶ್ರೀ ಅವರಿಂದ ರಚನೆಯಾಗಿದೆ. ಹರಟೆ ಸಂಕಲನದಲ್ಲಿ32 ಲೇಖನಗಳಿದ್ದು, ಮೊದಲನೆಯ ಸೋಂಬೇರಿ ಕಟ್ಟೆಮ್ಯಾಲೆ ಎನ್ನುವ ಹರಟೆಯೇ ಪವಿತ್ರ ಸ್ಥಳವಾದ ಅರಳೀಮರ ಕಟ್ಟೆಯ ಮೇಲೆ ಕೆಲಸವೇ ಇಲ್ಲದ ಹಳ್ಳಿ ಜನರು ಜ್ಞಾನಿಗಳಂತೆ ಹರಟೆ ಹೊಡೆದು ಕಾಲಾಹರಣದ ಜೊತೆಗೆ ತಮ್ಮ ಭವಿಷ್ಯವನ್ನೇ ಮೈಮರೆಯುವ ಸನ್ನಿವೇಶ ಧ್ವನಿಪೂರ್ಣವಾಗಿ ಚಿತ್ರಿತವಾಗಿದೆ. ನ್ಯಾಯ ಎಲ್ಲಿದೆ ಎನ್ನುವ ಹರಟೆಯಲ್ಲಿ ರೈತ ರಂಗಣ್ಣನ ಬವಣೆಯ ಕುಲುಮೆಯಲ್ಲಿ ಕುದಿಯುವ ಅವನ ಸಂಕಟ ಅನಾವರಣವಾಗಿದೆ. ಜೊತೆಗೆ, ಆಧುನಿಕ ಜೀವನದ ಸಾಧನವಾಗಿರುವ ಮೊಬೈಲ್‌ ಬಗ್ಗೆ, ಮೀಸಲಾತಿ ಬಗ್ಗೆ, ಕನ್ನಡಿಗರ ಅವಹೇಳನದ ಬಗ್ಗೆ ಹಾಗೂ ಎಣ್ಣೆ ಇದ್ರೆ ಓಟು ಇಲ್ಲಾಂದ್ರೆ.... ಎನ್ನುವ ಇಂದಿನ ಚುನಾವಣೆಯಲ್ಲಿ ರಾಜಕಾರಣಿಗಳು ಕಪ್ಪು ಹಣವನ್ನು ತಂದು ಹೆಂಡ, ಕೈಗಿಷ್ಟು ದುಡ್ಡು ಕೊಟ್ಟು ಓಟು ಹಾಕಿಸಿಕೊಳ್ಳುವ ಆಟ ಆಡುವುದನ್ನು ನವಿರಾಗಿ ವರ್ಣಿಸಿದ್ದಾರೆ.

About the Author

ಗೌಡಗೆರೆ ಮಾಯುಶ್ರೀ

ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಗೌಡಗೆರೆ ಮಾಯುಶ್ರೀ, ನಂತರ ಕನ್ನಡಕಟ್ಟಾಳು ವೈಶ್ರೀನಿವಾಸರ ನೇತೃತ್ವದ ವೀರಸೇನಾನಿ ಮ॥ ರಾಮಮೂರ್ತಿ ಕನ್ನಡ ಬಳಗದ ಗೌರವ ಕಾರ್ಯದರ್ಶಿಯಾಗಿ ಅನೇಕ ಕನ್ನಡ ಪರ ಹೋರಾಟ ಮತ್ತು ನಾಡು ನುಡಿ ನೆಲ ಜಲ ಪರವಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯನಾಗಿ, ಗಾಂಧಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಮೂರು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.. ಇವರು ಬರೆದ ಬಿಡಿ ಬಿಡಿ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಕರ್ಮವೀರ, ರಾಗಸಂಗಮ ಪ್ರಿಯಾಂಕ, ಮಾರ್ದನಿ, ಚಾಣಗೆರೆ ಪತ್ರಿಕೆ, ಬಹುಜನ ಕನ್ನಡಿಗರು, ಈ ಭಾನುವಾರ, ...

READ MORE

Related Books