ಮಾದರಿ ಐಎಎಸ್ ಅಧಿಕಾರಿ ಡಿ.ಕೆ. ರವಿ

Author : ಬಿ.ಕೆ. ಬನ್ನಪ್ಪ

Pages 84

₹ 75.00




Year of Publication: 2015
Published by: ಶ್ರೀ ಬನದೇಶ್ವರ ಪ್ರಕಾಶನ
Address: ಸೇಡಂ, ಜಿಲ್ಲೆ ಕಲಬುರಗಿ

Synopsys

ಲೇಖಕ ಬಿ.ಕೆ. ಬನ್ನಪ್ಪ ಅವರ ಕೃತಿ-ಮಾದರಿ ಐಎಎಸ್ ಅಧಿಕಾರಿ ಡಿ.ಕೆ.ರವಿ. ತುಮಕೂರು ಜಿಲ್ಲೆಯ ಡಿ.ಕೆ.ರವಿ ಎಂಬ ಐಎಎಸ್ ಅಧಿಕಾರಿ ತಮ್ಮ ಪ್ರಾಮಾಣಿಕ ವೃತ್ತಿ ಬದುಕಿನಿಂದ ಆಡಳಿತ ವಲಯದಲ್ಲಿ ಛಾಪು ಮೂಡಿಸಿದ್ದರು. ಆದರೆ, 2015ರ ಮಾರ್ಚ್ 15ರಂದು ಬೆಂಗಳೂರಿನ ಕೋರಮಂಗಲದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. (ಜನನ: 10 ಜೂನ್ 1979) ಕೇವಲ 35 ವರ್ಷ ವಯಸ್ಸಿನ ಈ ಅಧಿಕಾರಿ, ಆತ್ಮಹತ್ಯೆಯಂತಹ ನಿರ್ಣಯ ಏಕೆ ಕೈಗೊಂಡರು ಎಂಬ ಬಗ್ಗೆ ಈವರೆಗೂ ನಿಗೂಢ. ಇಂತಹ ಸಂಗತಿಗಳನ್ನು ಒಳಗೊಂಡ ಈ ಕೃತಿಯು, ಡಿ.ಕೆ. ರವಿ ಅವರ ಸಮಗ್ರ ಬದುಕಿನ ಚಿತ್ರಣ ನೀಡುತ್ತದೆ.

About the Author

ಬಿ.ಕೆ. ಬನ್ನಪ್ಪ

ಬಿ.ಕೆ. ಬನ್ನಪ್ಪ ಅವರು ಯಾದಗಿರಿ ಜಿಲ್ಲೆಯ ಮಾಧ್ವರ ಗ್ರಾಮದವರು. ಗ್ರಂಥಪಾಲಕರಾಗಿ ನಿವೃತ್ತರು.  ಕೃತಿಗಳು: ಐಎಎಸ್ ಅಧಿಕಾರಿ ಡಿ.ಕೆ ರವಿ, ಉತ್ತಮ ರಾಜಕಾರಣಿ ಯಾಗಬೇಕಾದರೆ...,,ಅರ್ಥ ಮಾಡಿಕೊಳ್ಳದ ಜೀವನ ವ್ಯರ್ಥ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?,ಭ್ರಷ್ಟಾಚಾರ ಭ್ರಷ್ಟಾಚಾರ.., ಸಮರ್ಥ ಮತ್ತು ಮಾದರಿ ನಾಯಕ ನರೇಂದ್ರ ಮೋದಿ, ಮೋದಿ ಅಲೆ ಏಕೆ, ಜೀವನ ಶಿಕ್ಷಣ ಹಾಗೂ ನೈತಿಕ ಶಿಕ್ಷಣ -ಹೀಗೆ ಒಂಬತ್ತು ಕೃತಿಗಳನ್ನು ಸಮರ್ಪಿಸಿದ್ದಾರೆ. ಪ್ರಶಸ್ತಿ-ಪುರಸ್ಕೃತರು: 1981 ರ ಜನಗಣತಿ ಕಾರ್ಯದಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ,ಸೇಡಂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನ್ನಡ ...

READ MORE

Related Books