ಮಧುರಿಮ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 170

₹ 99.00




Year of Publication: 2012
Published by: ಸುಧಾ ಎಂಟರ್‌ಪ್ರೈಸಸ್‌
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560070
Phone: 98454 49811

Synopsys

ಈ  ಕಾದಂಬರಿಯಲ್ಲಿ ಪುರೋಹಿತ್, ಸುಬ್ಬರಾಮಯ್ಯರ ಅಮರ ಸ್ನೇಹ, ಪ್ರಮೋದ್ ಚಕ್ರವರ್ತಿ, ವರ್ಷ ರ ಅಪರೂಪದ ದಾಂಪತ್ಯ, ಅಚ್ಯುತ ,ಸುಗುಣ ರ ಪಾತ್ರ, ಜವಹರ್ ಮಧುರಿಮ ನಡುವೆ ನಡೆಯುವ ಸಂಭಾಷಣೆ ಯ ಸೊಗಸು  ಇವೆಲ್ಲವೂ ಈ ಕಾದಂಬರಿಯಲ್ಲಿ ಸುಂದರವಾಗಿ ಮೂಡಿಬಂದಿವೆ.ನಮಗೆ ಸಿಗುವ ಸ್ನೇಹ ಸಂಬಂಧ ಸ್ನೇಹ! ರಕ್ತ ಸಂಬಂಧ, ಬಡವ,ಶ್ರೀಮಂತ ಯಾವುದೂ ಮಧ್ಯ ಬರದಂತಹ ಬಾಂಧವ್ಯವೇ ಸ್ನೇಹ.ಎರಡು ಫ್ಯಾಕ್ಟರಿಗಳ ಮಾಲಕರ ಸ್ನೇಹ ಇದಕ್ಕೆ ಉತ್ತಮ ಉದಾಹರಣೆಯಾಗಿವೆ. ,ಮುಂಬೈ ನಿವಾಸಿ ಸುಬ್ಬರಾಮಯ್ಯ ಮತ್ತು ಮಧ್ಯಮ ವರ್ಗದ ಬೆಂಗಳೂರು ನಿವಾಸಿ ಪುರೋಹಿತ್ ಅವರದು.ಸಂತೋಷದ ಸಂಗತಿಯಾಗಲೀ,ದುಃಖದ ವಿಷಯವಾಗಲೀ ಮೊದಲು ಒಬ್ಬರಿಗೊಬ್ಬರು ತಿಳಿಸುತ್ತಿದ್ದರು.ಬ್ಬರದೂ ಸ್ವಾರ್ಥ ರಹಿತ ಅದ್ಭುತ ಸ್ನೇಹ.B. com ಮುಗಿಸಿ ಮುಂದೇನು ಎಂದು ಯೋಚಿಸುವಷ್ಟರಲ್ಲಿ ಮುಂಬೈಗೆ ಬಂದ ಮಧುರಿಮ ಗೆ ತನ್ನನ್ನು ತನ್ನನ್ನು ಮುಂಬೈಗೆ ಕರೆದುಕೊಂಡು ಬರಲು ಕಾರಣವೇನೆಂದು? ಅವಳಲ್ಲಿ ಉಂಟಾಗುವ ಗೊಂದಲಗಳು ಈ ಕೃತಿಯಲ್ಲಿ ಮೂಡಿಬಂದಿವೆ.ಪ್ರೀತಿಯಿಂದ, ಸಲುಗೆಯಿಂದ ಸುಬ್ಬರಾಮಯ್ಯ ನವರ ಜೊತೆ ಇದ್ದ ಮಧುರಿಮಳಿಗೆ ಜವಹರ್ ಎದುರಾದಾಗೆಲ್ಲ ಇಬ್ಬರ ನಡುವೆಯುವ ಮಾತಿನ ಚಕಮಕಿ , ಜವಾಹರ್ನಿಂದ ದೂರವಿರಲು ಮಧುರಿಯ ಪ್ರಯತ್ನ , ಮಧುರಿಮ ಳ ಫೋಟೋ ನೋಡಿಯೇ ಮದುವೆಗೆ ಒಪ್ಪಿಕೊಂಡಿದ್ದ ಶ್ರೀಕರ, ಬೆಂಗಳೂರಿಗೆ ಬೇಗ ವಾಪಸ್ ಬರಬೇಕೆಂದು ತಾನೇ ರಚಿಸಿದ ಪ್ಲಾನ್ ನಲ್ಲಿ ಸಿಕ್ಕಿಬೀಳುತ್ತಾಳೆ ಮಧುರಿಮ... ಮುಂದೇನಾಯ್ತು? ಜವಹರ್ ಯಾರನ್ನು ವಿವಾಹ ವಾಗುತ್ತಾನೆ?ರಚನಾಳನ್ನೊ, ಮಧುರಿಮಳನ್ನೊ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಈ ಕಾದಂಬರಿಯಲ್ಲಿ ದೊರಕುತ್ತವೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books