ಮಾಧ್ಯಮ ಶೋಧ ಸಂಕೀರ್ಣ

Author : ಸಿಬಂತಿ ಪದ್ಮನಾಭ ಕೆ.ವಿ

Pages 160

₹ 130.00




Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: # 375/15, ಕೆಂಪೇಗೌಡ ನಗರ, 1ನೇ ಮೈನ್, 8ನೇ ಕ್ರಾಸ್, ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು-91

Synopsys

ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಸಂಬಂಧಿಸಿದ ವಿದ್ವತ್ಪೂರ್ಣ ಮಾಹಿತಿಯನ್ನೊಳಗೊಂಡ ಅಂಕಣ ಬರಹಗಳ ಸಂಕಲನ. ಪತ್ರಿಕೋದ್ಯಮ ಶಿಕ್ಷಣಕ್ಕೆ ಉಪಯುಕ್ತ ಅನುಭವಾಧಾರಿತ ಪ್ರಧಾನ ಪರಾಮರ್ಶನ ಗ್ರಂಥವೂ ಆಗಿದೆ. ಕಾಲ ಹಾಗೂ ಜಾಗದ ಮಿತಿಗೆ ಒಳಪಟ್ಟು ಬರೆದ ಅಂಕಣ ಬರಹಗಳು ಇವಾದರೂ ಎಲ್ಲ ಕಾಲಕ್ಕೂ ಚರ್ಚಿಸಲೇ ಬೇಕಾದ ವಿಷಯಗಳನ್ನು ಒಳಗೊಂಡಿವೆ.

About the Author

ಸಿಬಂತಿ ಪದ್ಮನಾಭ ಕೆ.ವಿ

ಸಿಬಂತಿ ಪದ್ಮನಾಭ ಕೆ. ವಿ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದವರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ , ಆನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯೊಂದಿದ್ದು ಫೆಲೋಶಿಪ್‌ಗೆ ಆಯ್ಕೆಯಾಗಿ,  'ವಿಜಯ್ ಟೈಮ್' ಹಾಗೂ 'ಡೆಕ್ಕನ್ ಹೆರಾಲ್ಡ್' ದೈನಿಕಗಳಲ್ಲಿ ಪತ್ರಕರ್ತರಾಗಿದ್ದರು.   ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಘಟಕ ಸಂಸ್ಥೆ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರಾಗಿದ್ದು, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಯಕ್ಷಗಾನ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. “ಪೊರೆ ಕಳಚಿದ ಮೇಲೆ', 'ತುಮಕೂರು ಜಿಲ್ಲೆಯ ...

READ MORE

Related Books