ಮಾಧ್ಯಮಗಳು ಮತ್ತು ಭಾಷಾಂತರ

Author : ಎ. ಮೋಹನ ಕುಂಟಾರ್

Pages 142

₹ 120.00




Year of Publication: 2016
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಭಾಷಾಂತರ ಮತ್ತು ಮಾಧ್ಯಮಕ್ಕೆ ಸಂಬಂಧಿಸಿ ಅಧ್ಯಯನ ಮಾಡುವವರಿಗೆ ಕೈಪಿಡಿ ’ಮಾಧ್ಯಮ ಮತ್ತು ಭಾಷಾಂತರ’. ಭಾಷಾಂತರ ಎಂಬುದು ಕಲೆಯೂ ಹೌದು ಶಾಸ್ತ್ರವೂ ಹೌದು. ಜಗತ್ತಿನ ಮಾಹಿತಿಗಳನ್ನು ಮಾಧ್ಯಮಗಳು ಜನರಿಗೆ ತಲುಪಿಸಬೇಕಾದರೆ “ಅನುವಾದ ಕಲೆ'ಯನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ಇಂದಿನ ಪ್ರಿಂಟ್ ಮತ್ತು ದೃಶ್ಯಮಾಧ್ಯಮಗಳಿಗೆ ಅನುವಾದ ಮಾಡುವುದು ಅಗತ್ಯದ ಕೆಲಸವಾಗಿದೆ. ಜಗತ್ತಿನ ಜ್ಞಾನವನ್ನು ಆಯಾ ಭಾಷೆಯ ಮೂಲಕ ಜನರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಮಾಧ್ಯಮಗಳು ಅನುವಾದ'ವೆಂಬ ಬಹುಶಿಸ್ತೀಯ ನೆಲೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮಹತ್ವದ ಸಂಗತಿ, ವಿಷಯ, ಘಟನೆಯ ಕುರಿತು ಮಾಹಿತಿಯನ್ನು ಒದಗಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ, ಈ ಕೃತಿಯು ಉತ್ತಮ ಒಳನೋಟ ನೀಡುತ್ತದೆ.

About the Author

ಎ. ಮೋಹನ ಕುಂಟಾರ್
(25 May 1963)

ಡಾ. ಎ. ಮೋಹನ್ ಕುಂಟಾರ್ ಅವರು 25-05-1963ರಂದು ಜನಿಸಿದರು. ಬಿ.ಎ, ಎಂ.ಎ, ಎಂ.,ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ  ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ,”ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ.  ...

READ MORE

Related Books