
’ಮಡಿಲ ನಕ್ಷತ್ರ’ ರೇಖಾ ಭಟ್ಟ ಅವರ ಮೊದಲ ಗಜಲ್ ಸಂಕಲನ. ಬರೀ ಭಾವ ತೀವ್ರತೆಗಳಲ್ಲದೆ 'ಬದುಕು ಕಟ್ಟುವ ಕಲೆ' ಇದೆ. 'ಮುಗಿಲೂರಿಗೆ ಹೊರಟ ದಿಬ್ಬಣ', 'ಬೆಚ್ಚಗಿನ ಹಂಬಲಕ್ಕೆ ಹರಿದ ಕೌದಿಯ ಹೊಲಿಯುವ', 'ಒಲವೇ ಇರದ ಕಂಗಳ ದೀಪವು ಬೆಳಕಾಗಬಲ್ಲದೇ?!’, 'ಹಸಿದಿರುವ ಒಡಲಿಗಾಗಿ ಅಲೆಯುತ್ತಿದ್ದೆ ಉಣಿಸಿನ ನೆಲೆಗಳರಸಿ', 'ಕಳೆದುದೆಲ್ಲಾ ಹುಡುಕಲು ಕಾಡು ಬೇಕಿದೆ', 'ನಲ್ಮೆಯಿರದ ಬಾಳಿಗೊಂದು ಅರ್ಥವಿದೆಯೇ?, ಈ 'ಕಳೆದು ಹೋದ ಕನಸಿನ ಹುಡುಗಿಗೆ', 'ಚೆಲುವಿನರಸಿ ಒಲವ ಬೆರೆಸಿ ಕೂಡು', 'ತಮದ ಹಾದಿಗೆ ಬೆಳಕ ಹಚ್ಚಡ' ಸೇರಿದಂತೆ ಇತರೆ ಗಜಲ್ ಗಳಿವೆ.
ಗಜಲ್‌ಗಳ ಕೆಲವು ಸಾಲುಗಳು ಹೀಗಿವೆ. ‘ಬಿತ್ತಿದ ಪ್ರೇಮಬೀಜಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿವೆ. ಹಸಿರೊಡಲ ಬಾಚಿ ನುಂಗುವ ಬೆಂಕಿಮಳೆಗೆ ಕೊನೆಯಿಲ್ಲ’ ‘ನಸುಕಲಿ ಸಹನೆಯಿಂದ ಮುತ್ತುಕಟ್ಟಿದ ಇಬ್ಬನಿ ಸಾಲು ಕುಡಿಯೊಡೆದ ಚಿಗುರೆಲೆ ಬಾಳಲಿ ಐಸಿರಿಯ ತಂತು’ ‘ಆಯುಧಗಳಿಗಿಂತ ರೋಗಗ್ರಸ್ತ ಮನಕೆ ಔಷಧಿ ಬೇಕೀಗ ರಕ್ಕಸ ಬೆರಳುಗಳಲಿ ಹೂವರಳಿದ ಬಗೆಯೊಂದ ಹೇಳು ಬಾ’.
©2025 Book Brahma Private Limited.