ಮದುವೆಯ ಆಲ್ಬಮ್

Author : ಗಿರೀಶ ಕಾರ್ನಾಡ

Pages 100

₹ 70.00




Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ, ಸುಭಾಸ ರಸ್ತೆ, ಧಾರವಾಡ-1

Synopsys

ಐತಿಹಾಸಿಕ ಮತ್ತು ಪೌರಾಣಿಕ ವಸ್ತುಗಳನ್ನು ಆಧರಿಸಿದ ನಾಟಕಗಳ ಮೂಲಕ ಪ್ರಸಿದ್ದರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಅವರ ನಾಟಕ. ಸಾಮಾಜಿಕ ವಸ್ತು ಆಧರಿಸಿದ ನಾಟಕ ಇದು. ಮದುವೆಯ ಆಲ್ಬಮ್ ನಾಟಕಕ್ಕಿಂತ ಮುಂಚೆ ಗಿರೀಶ ಅವರು ‘ಅಂಜು ಮಲ್ಲಿಗೆ’ ಎಂಬ ನಾಟಕ ಪ್ರಕಟಿಸಿದ್ದರು. ಅದು ಸಮುದ್ರದಾಚೆಗೀನ ಕಥೆಯನ್ನು ಒಳಗೊಂಡಿತ್ತು. ಅದಾದ ಮೇಲೆ ಆಧುನಿಕ ತಂತ್ರಜ್ಞಾನ ಬಳಸಿ ಏಕವ್ಯಕ್ತಿ ಪ್ರದರ್ಶನದ ‘ಬಿಂಬ’ ಎಂಬ ನಾಟಕ ಪ್ರಕಟಿಸಿದ್ದರು. ಅದಾದ ಮೇಲೆ ‘ಮದುವೆಯ ಆಲ್ಬಮ್’ ನಾಟಕ ಬರೆದಿದ್ದಾರೆ. ಸಮಕಾಲೀನ ಜೀವನದ ಬಗ್ಗೆ  ನಾಟಕ ಬರೆದರೆ ಮಾತ್ರ ಖರೇ ನಾಟಕಕಾರ’ ಎಂದು ಹಿರಿಯ ನಾಟಕಕಾರ- ಪ್ರಕಾಶಕ ಜಿ.ಬಿ. ಜೋಷಿ ಅವರು ಹೇಳಿದ್ದನ್ನು ಪ್ರಸ್ತಾಪಿಸಿರುವ ಗಿರೀಶ ಅವರು ಅದಕ್ಕೆ ಪ್ರತಿವಾದ ಹೂಡಲು ‘ಸಮಕಾಲೀನ ಸಂವೇದನೆ ಮುಖ್ಯ ಹೊರತು ವಿಷಯವಲ್ಲ’ ಎಂದು  ಹೇಳಿದ್ದರಂತೆ. ಅದನ್ನು ಸ್ಮರಿಸಿರುವ ಗಿರೀಶ ಅವರು ಜಿ.ಬಿ. ಶತಮಾನೋತ್ಸವ ಸಂದರ್ಭದಲ್ಲಿಯಾದರೂ ‘ಖರೆ ನಾಟಕಕಾರ’ ಎಂದು ಸಿದ್ದಗೊಳಿಸಲು ಅವಕಾಶ ದೊರೆಯಿತಲ್ಲ ಎಂದು ಹೇಳಿದ್ದಾರೆ. ಸಮಕಾಲೀನ ಜೀವನವನ್ನು ಆಧಿರಿಸಿದ ನಾಟಕ ‘ಮದುವೆಯ ಆಲ್ಬಮ್’.

About the Author

ಗಿರೀಶ ಕಾರ್ನಾಡ
(19 May 1934 - 10 June 2019)

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...

READ MORE

Related Books