ಮದುವೆ: ಒಂದು ಜನಪದೀಯ ಅಧ್ಯಯನ

Author : ಶಾಂತಪ್ಪ ಎನ್. ಡಂಬಳ

Pages 83

₹ 80.00




Year of Publication: 2011
Published by: ಚೇತನ ಪ್ರಕಾಶನ
Address: ಸರಸ್ವತಿಪುರ, ಗುಲಬರ್ಗಾ ವಿಶ್ವವಿದ್ಯಾಲಯ ಅಂಚೆ, ಕಲಬುರಗಿ-585106

Synopsys

ಮದುವೆ: ಒಂದು ಜನಪದೀಯ ಅಧ್ಯಯನ- ಈ ಕೃತಿಯು ಡಾ. ಶಾಂತಪ್ಪ ಎನ್. ಡಂಬಳ ಅವರು ರಚಿಸಿದ್ದಾರೆ. ವ್ಯಕ್ತಿಯ ಬದುಕಿನ ಹಾದಿಯಲ್ಲಿ ಮದುವೆ ಎಂಬುದು ಸಾಮಾಜಿಕ-ಸಾಂಸ್ಕೃತಿಕವಾಗಿ ಮಹತ್ವದ ಘಟ್ಟ. ಲೇಖಕಿ ಡಾ. ಶಿವಗಂಗಾ ರುಮ್ಮಾ ಅವರು ಕೃತಿಗೆ ಬೆನ್ನುಡಿ ಬರೆದು‘ ಮುಂದಿನ ಪೀಳಿಗೆಗೆ ಮದುವೆ ಎಂಬ ಸಂಸ್ಥೆಯ ಆಚರಣೆಯ ವಿಧಿ ವಿಧಾನಗಳನ್ನು ಪರಿಚಯಿಸುವುದಷ್ಟೇ ಈ ಕೃತಿ ಮಾಡುವುದಿಲ್ಲ. ಪ್ರಾದೇಶಿಕ ವೈಶಿಷ್ಟ್ಯಗಳನ್ನೂ ಸಹ ದಾಖಲಿಸುತ್ತದೆ. ಮದುವೆ ಸಂಸ್ಥೆಯ ಉಗಮ, ವಿಕಾಸ, ಆಚರಣೆಯ ವಿಧಿವಿಧಾನಗಳು, ಪ್ರಾದೇಶಿಕ ವೈಶಿಷ್ಟ್ಯ, ಹೀಗೆ ವೈವಿಧ್ಯಮಯವಾಗಿ ಚಿತ್ರಿಸುತ್ತದೆ. ಲಗ್ನದ ಪತ್ರಿಕೆ ತೆಗೆಸುವುದು, ಹಂದರ ಹಾಕುವುದು, ಹಾಲಗಂಬ ನೆಡುವುದು, ಒಳಕಲ್ಲು ಪೂಜೆ, ಎಣ್ಣೆ ಹಚ್ಚುವುದು, ಬಾಸಿಂಗ ತರುವುದು, ಪುರವಂತಿಕೆ ಆಡುವುದು, ಕೂಸು ಒಪ್ಪಿಸುವುದು, ಮದುಮಕ್ಕಳಿಗೆ ನೀರು ಎರೆಯುವುದು ಇತ್ಯಾದಿ ಸಂಪ್ರದಾಯಗಳು ಈಗ ಮರೆಯಾಗುತ್ತಿದ್ದು, ಅದನ್ನು ಉಳಿಸಿಕೊಳ್ಳುವತ್ತ ಈ ಕೃತಿ ಮಹತ್ವದ ಕೊಡುಗೆ ನೀಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಶಾಂತಪ್ಪ ಎನ್. ಡಂಬಳ
(22 July 1972)

ಡಾ. ಶಾಂತಪ್ಪ ಎನ್. ಡಂಬಳ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ (ಜನನ: 22-07-1972) ತಾಲೂಕಿನ ಮಳ್ಳಿ ಗ್ರಾಮದವರು. ಕರ್ನಾಟಕ ವಿ.ವಿ.ಯಿಂದ ಬಿ.ಎ, ಗುಲಬರ್ಗಾ ವಿ.ವಿ.ಯಿಂದ ಸ್ನಾತಕೋತ್ತರ ಎಂ.ಎ, ಬಿ.ಈಡಿ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು: ಒಂದು ಅಧ್ಯಯ” ವಿಷಯವಾಗಿ ಎಂ.ಫಿಲ್,  ರಸ್ತಾಪುರದ ಭೀಮಕವಿ ಹಾಗೂ ಅವರ ಕೃತಿಗಳು: ಒಂದು ಅಧ್ಯಯನ’ ವಿಷಯವಾಗಿ ಪಿ.ಎಚ್.ಡಿ ಪಡೆದಿದ್ದಾರೆ.  ಕೃತಿಗಳು: ರಸ್ತಾಪೂರ ಭೀಮಕವಿ ವಿರಚಿತ ದೋರನಹಳ್ಳಿ ಶ್ರೀ ಮಹಾಂತೇಶ್ವರ ಪುರಾಣ (ಸಂಪಾದನೆ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಮದುವೆ: ಒಂದು ಜನಪದೀಯ ಅಧ್ಯಯನ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು, ರಸ್ತಾಪುರದ ಭೀಮಕವಿ (ಸಂಶೋಧನಾ ...

READ MORE

Related Books