ಮದುವೆಯೋ ಮನೆಹಾಳೋ? ಅಥವಾ ಮುಪ್ಪಿನ ಮೋಹ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 176




Year of Publication: 1950
Published by: ಆನಂದ ಬ್ರದರ್ಸ್ ಪ್ರಕಾಶನ
Address: ಬೆಂಗಳೂರು

Synopsys

1928 ರಲ್ಲಿ ಮೊದಲ ಮುದ್ರಣ ಕಂಡಿದ್ದ ಅ.ನ.ಕೃಷ್ಣರಾಯರ ಪ್ರಹಸನ-ಮದುವೆಯೋ ಮನೆಹಾಳೋ ಅಥವಾ ಮುಪ್ಪಿನ ಮೋಹ. ಪ್ರಸ್ತುತ ಕೃತಿ 2ನೇ ಆವೃತ್ತಿ. ಈ ಮಧ್ಯೆ, ಈ ನಾಟಕವು ಅಂದಿನ ಕರ್ನಾಟಕದ ಬಹುಭಾಗದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಗೆದ್ದಿತ್ತು. ಪಂಡಿತ ತಾರಾನಾಥರು ಮುನ್ನುಡಿ ಬರದು ‘ಈ ನಾಟಕವು ಸತ್ಯದ ಬುನಾದಿ ಹಾಕಲು ಇಚ್ಛಿಸುವವರಿಗೆ ಸ್ಫೂರ್ತಿ ನೀಡುತ್ತದೆ’ ಎಂದು ಪ್ರಶಂಸಿಸಿದ್ದರೆ ಸಾಹಿತಿ ಸಿ.ಕೆ.ವೆಂಕಟರಾಮಯ್ಯ ಅವರು ‘ವಿವಾಹ ಚಪಲದ ಶ್ರೀಮಂತ ವೃದ್ಧನಿಗೆ ಬುದ್ದಿ ಕಲಿಸುವ ವಿಡಂಬನಾತ್ಮಕ ನಾಟಕ ಪ್ರೇಕ್ಷಕರನ್ನು ರಂಜಿಸುತ್ತದೆ’ ಎಂದು ಶ್ಲಾಘಿಸಿದ್ದಾರೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books