ಮಹಾದೇವ ದೇಸಾಯಿಯವರ ಕೃತಿಗಳು

Author : ಗೊರೂರು ರಾಮಸ್ವಾಮಿ ಅಯ್ಯಂಗಾರ್

Pages 194

₹ 2.00




Year of Publication: 1954
Published by: ಮಾರುತಿ ಪುಸ್ತಕ ಮಂದಿರ
Address: ಅವಿನ್ಯೂ ರಸ್ತೆ, ಬೆಂಗಳೂರು

Synopsys

ಮಹಾದೇವ ದೇಸಾಯಿ ಅವರು ಅಪ್ರತಿಮ ದೇಶಪ್ರೇಮಿಗಳು. ಗಾಂಧೀಜಿಯ ಒಡನಾಡಿಗಳು. ತೀಕ್ಷ್ಣ ಹಾಗೂ ಸೂಕ್ಷ್ಮ ಮತಿಗಳು. ಇತಿಹಾಸ ಪ್ರಸಿದ್ಧ ಭೇಟಿ, ಋಷಿಕೇಶದ ಒಂದು ನೋಟ, ಬಾಂಬು ಹಾಕಲು ಬೆಕ್ಕು, ಶ್ರದ್ಧೆ-ನಂಬಿಕೆಗೆ ಸಂಚಕಾರ, ಹಿಂದಲ ತ್ಯಾಗಕ್ಕೆ ಇಂದು ಬೆಲೆ, ನಮ್ಮ ಕಾಲಕ್ಕೆ ನಾವು ದೇವರಿಗೆ ಹೊಣೆಗಾರರು, ವೇಗವು ಗ್ರಾಮ ಸಂಸ್ಕೃತಿಗೆ ವಿರೋಧವಾದುದು, ಸೀಮ್ಲಾದಲ್ಲಿಯ ಬಡವರು, ಸಾಮ್ರಾಜ್ಯವಾದಿಗಳ ಗ್ಯಾಂಗು ಹೀಗೆ ಒಟ್ಟು 24 ಕೃತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. ವಿಷಯ ವಸ್ತು, ಅದರ ಪ್ರತಿಪಾದನೆಯ ರೀತಿ, ನಿರೂಪಣಾ ಶೈಲಿ ಇಂಹ ಅಂಶಗಳಿಂದ ಈ ಸಾಹಿತ್ಯಕ ಕೃತಿಗಳು ತಮ್ಮ ಉನ್ನತ ಮಟ್ಟವನ್ನು ಕಾಯ್ದುಕೊಂಡಿವೆ.

About the Author

ಗೊರೂರು ರಾಮಸ್ವಾಮಿ ಅಯ್ಯಂಗಾರ್
(04 July 1904 - 28 September 1991)

ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...

READ MORE

Related Books