ಮಹಾಭಾರತ

Author : ಗೋಪಾಲಕೃಷ್ಣ ಮಧ್ಯಸ್ಥ

Pages 172

₹ 120.00
Year of Publication: 2017
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಮಹಾಭಾರತ’ ಮಕ್ಕಳಿಗಾಗಿ ಐಜೆನ್ ಬಿ ಅವರ ಇಂಗ್ಲಿಷ್ ಕೃತಿಯನ್ನು ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದೂ ಧಾರ್ಮಿಕ ಗ್ರಂಥವಾದ ಮಹಾಭಾರತ ನೈತಿಕ ಮೌಲ್ಯಗಳನ್ನು ಒಳಗೊಂಡ ಕೃತಿ. ಮಕ್ಕಳಲ್ಲಿ ನೈತಿಕತೆ ತುಂಬುವ ಸಲುವಾಗಿ ಮಹಾಭಾರತದ ಕತೆಗಳನ್ನು ಹಲವು ಭಾಷೆಗಳಲ್ಲಿ ರಚಿಸಲಾಗಿದೆ. ಐಜೆನ್ ಬಿ ಅವರು ಇಂಗ್ಲಿಷಿನಲ್ಲಿ ಬರೆದಿದ್ದ ಈ ಕೃತಿಯನ್ನುಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಗೋಪಾಲಕೃಷ್ಣ ಮಧ್ಯಸ್ಥ
(16 August 1945)

ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಇರುವ ಜಿ.ಕೆ. ಮಧ್ಯಸ್ಥ ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಬದಲಾವಣೆಯನ್ನು ವಿಶ್ಲೇಷಣೆ ಮಾಡುತ್ತಾರೆ. ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿರುವ ಅವರು ‘ದುಡ್ಡು ಕಾಸು', 'ಪದೋನ್ನತಿ' ಎಂಬ ಎರಡು ಅಂಕಣ ಬರಹಗಳನ್ನು ಪುಸ್ತಕಗಳಾಗಿ ಪ್ರಕಟಿಸಿದ್ದಾರೆ. ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರುವಿನಲ್ಲಿ. ...

READ MORE

Related Books