ಮಹಾಗಾರುಡಿ

Author : ಬಿದರಹಳ್ಳಿ ನರಸಿಂಹಮೂರ್ತಿ

Pages 76

₹ 50.00




Year of Publication: 2009
Published by: ಸಿಂಚನ ಪ್ರಕಾಶನ
Address: ವಿದ್ಯಾನಗರ, ಪಿ.ಬಿ. ರಸ್ತೆ, ಹಾವೇರಿ- 581110
Phone: 9448941294

Synopsys

‘ಮಹಾಗಾರುಡಿ’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರು ರಚಿಸಿರುವ ನಾಟಕ. ಕವಿತೆ-ಕತೆಗಳನ್ನು ರಚಿಸುತ್ತಿದ್ದ ನರಸಿಂಹಮೂರ್ತಿ ಅವರು ಈ ಕೃತಿಯ ಮೂಲಕ ನಾಟಕಕಾರಾಗಿಯೂ ಹೊರಹೊಮ್ಮಿದ್ದಾರೆ.  ಪ್ರಕಾರ ಬೇರೆಯಾದರೂ ಅವರ ಸಾಹಿತ್ಯದ ಮೂಲಕ ಲೋಕಹಿತ ಸಾಧ್ಯವೆನ್ನುವ ಅಪೇಕ್ಷೆ, ಉದ್ದೇಶ, ಆದರ್ಶಗಳು ಬೇರೆಯಾಗಿಲ್ಲ. ಭಾಸನ ಪಂಚರಾತ್ರ ನಾಟಕದಂತೆಯೇ ಇದೂ ಮಹಾಭಾರತವನ್ನು ಆಧರಿಸಿ ರೂಪುಗೊಂಡ ನಾಟಕ. ಅಲ್ಲಿನಂತೆಯೇ ಇಲ್ಲಿಯೂ ಯುದ್ಧ ನಡೆಯದು. ಅಲ್ಲಿಗಿಂತ ಭಿನ್ನವಾಗಿ ಇಲ್ಲಿ ಕರ್ಣ-ದ್ರೌಪದಿಯರ ಸಂಬಂಧ. ಮುಂದಾಗುವ ಕೆಡುಕು ಖಚಿತವೆಂದು ಕಂಡಮೇಲೆ ಅದನ್ನು ತಪ್ಪಿಸಲು ವಿನಾಶದತ್ತ ಸಾಗುತ್ತಿರುವ ಮನುಕುಲ ಹಿಡಿಯಬೇಕಾದ ಹಾದಿ ಇದು ಎಂದು ಮಹಾಭಾರತದ ಮರುರಚನೆಯ ಮೂಲಕ ಮೂರ್ತಿ ತೋರಲು ಬಯಸಿದ್ದಾರೆ.

ಜ್ಞಾನಸಿಂಧು ವ್ಯಾಸ ಮತ್ತು ಲೋಕವಿವೇಕಿ ಕೃಷ್ಣ ಇಬ್ಬರೂ ಒಂದುಗೂಡಿ ಯುದ್ಧತಂತ್ರವನ್ನು ಶಾಂತಿಯ ಪ್ರತಿತಂತ್ರದಿಂದ ಮುರಿದು ಲೋಕದ ಉಳಿವಿಗೆ ಶ್ರಮಿಸುವ ಈ ನಾಟಕ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಎಷ್ಟೇ ಅಸಾಧ್ಯವೆನಿಸಿದರೂ ಶಾಂತಿಯನ್ನು ಬಯಸುವ ಲೋಕಕ್ಕೆ ದಾರಿ ತೋರುವ ನಾಯಕರು ಹಿಡಿಯಬೇಕಾದ ದಾರಿಯನ್ನು ತೋರುತ್ತದೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books