ಮಹಾಕಾದಂಬರಿ ‘ಸಮರಸವೇ ಜೀವನ’ ಕೃತಿ ಚಿಂತನ

Author : ಜಿ.ಎಂ. ಹೆಗಡೆ

Pages 424

₹ 450.00




Year of Publication: 2022
Published by: ಸಂವಹನ
Address: ಶಿವರಾಮ ಪೇಟೆ ಮೈಸೂರು 570001

Synopsys

ವಿನಾಯಕ ಕೃಷ್ಣ ಗೋಕಾಕರ 'ಸಮರಸವೇ ಜೀವನ' ಕನ್ನಡದ ಮಹಾಕಾದಂಬರಿಯಾಗಿ ಖ್ಯಾತವಾಗಿದೆ. ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಬರುವ 'ರಸವೆ ಜನನ, ವಿರಸ ಮರಣ ಸಮರಸವೇ ಜೀವನ' ದರ್ಶನವನ್ನು ಇದು ಸಾಕಾರಗೊಳಿಸುತ್ತದೆ. ಒಂದು ಪೂರ್ಣ ದೃಷ್ಟಿಯ ಚಿಂತನಕ್ರಮವು ಹೇಗೆ ದೇಶ ಕಾಲಾತೀತವಾಗಿ ವಿಕಾಸೋನ್ನತಿಯನ್ನು ಪಡೆಯಬಲ್ಲುದೆಂಬುದಕ್ಕೆ ಇದು ಸಾಕ್ಷಿಯಾಗಿದೆ. ವಿನಾಯಕ ಕೃಷ್ಣ ಗೋಕಾಕರು ಪೂರ್ಣ ದೃಷ್ಟಿಯ ಅನ್ವೇಷಕರು. ಅವರ ಮಹಾಪ್ರತಿಭೆ, ಆದರ್ಶವಾದ ಹಾಗೂ ವಿಶ್ವಮಾನವ ದೃಷ್ಟಿಯ ಪ್ರತಿಪಾದನೆಗಳು ಇದರಲ್ಲಿ ಅಂತಸ್ಥವಾಗಿವೆ. ನಾಲ್ಕು ತಲೆಮಾರುಗಳ ವೈವಿಧ್ಯಪೂರ್ಣ ಜೀವನ, ಭಾರತ ಮತ್ತು ಕಡಲಾಚೆಯ ಜೀವನ ವಿನ್ಯಾಸ, ಆದರ್ಶ ಅನುಭವಸಿದ್ಧಿಗಳು, ಬಾಳನ ರಹಸ್ಯವನ್ನು ತಿಳಿಯಲು ನಡೆಸುವ ಅರ್ಥಶೋಧ ಇದರಲ್ಲಿದೆ. ಉತ್ತರ ಕರ್ನಾಟಕದ ಪ್ರಾದೇಶಿಕ ವಿವರ ಗಳನ್ನೊಳಗೊಂಡ 'ಸಮರಸವೇ ಜೀವನ' ಕಳೆದ ಶತಮಾನದ ಜೀವನಕ್ರಮ ಆಧುನೀಕರಣದ ಪ್ರಕ್ರಿಯೆಗೆ ಒಳಗಾದುದನ್ನು ಸಮರ್ಥವಾಗಿ ಚಿತ್ರಿಸುತ್ತದೆ.

About the Author

ಜಿ.ಎಂ. ಹೆಗಡೆ
(12 December 1952)

ವಿಮರ್ಶಕ ಜಿ.ಎಂ. ಹೆಗಡೆ ಅವರು  ಧಾರವಾಡದ ಕಿಟೆಲ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ.  ಕೃತಿಗಳು:  ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ.    ...

READ MORE

Related Books