ಮಹಾಕವಿ ಲಕ್ಷ್ಮೀಶನ ವಚನ ಜೈಮಿನಿ ಭಾರತ

Author : ಜಿ. ಕೃಷ್ಣಪ್ಪ

Pages 212

₹ 135.00




Year of Publication: 2012
Published by: ಕಾಮಧೇನು ಪ್ರಕಾಶನ
Address: #5/1 ನಾಗಪ್ಪಬೀದಿ, ಶೇಷಾದ್ರಿಪುರ, ಬೆಂಗಳೂರು- 560020
Phone: 9449446328

Synopsys

ಕವಿ ಡಾ. ಜಿ. ಕೃಷ್ಣ ಅವರು ಮಹಾಕವಿ ಲಕ್ಷ್ಮೀಶನ ಜೈಮಿನಿ ಭಾರತವನ್ನು ಸರಳವಾಗಿ ತಮ್ಮದೇ ನೆಲೆಯಲ್ಲಿ ವ್ಯಾಖ್ಯಾನಿಸಿ -ವಿಶ್ಲೇಷಿಸಿ ಬರೆದ ಕೃತಿ ಇದು. ಮಹಾಭಾರತದ ಕಥೆಯನ್ನು ಹೊಂದಿರುವ ಭಾಮಿನಿ ಷಟ್ಪದಿಯಲ್ಲಿಯ ಮೂಲ ಜೈಮಿನಿ ಭಾರತವನ್ನು ಸರಳವಾಗಿ ಕನ್ನಡಕ್ಕೆ ರೂಪಾಂತರಿಸುವ ಮೂಲಕ ಕನ್ನಡದ ಹೆಚ್ಚು ಓದುಗರನ್ನು ತಲುಪುವಂತಾಗಿದೆ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Reviews

(ಹೊಸತು,  ಮಾರ್ಚ್ 2013, ಪುಸ್ತಕದ ಪರಿಚಯ)

ಕನ್ನಡ ಸಾಹಿತ್ಯ ಪರಂಪರೆಯ ದಿಗ್ಗಜರಲ್ಲಿ ಪಂಪ, ರನ್ನ, ಕುಮಾರವ್ಯಾಸರಷ್ಟೇ ಪ್ರತಿಭಾಶಾಲಿ ಕವಿ ಲಕ್ಷ್ಮೀಶ, ಈ ಮೇಲಿನ ಕವಿಪುಂಗವರ ಕಾವ್ಯ ಕೃತಿಗಳನ್ನು ಅನೇಕ ವಿದ್ವಾಂಸರು ಗದ್ಯರೂಪಕ್ಕೆ ತಂದಿದ್ದಾರೆ. ಒಂದೇ ಕೃತಿಗೆ ಹಲವು ರೀತಿಯ ಗದ್ಯರೂಪಗಳು ಬಂದಿರುವುದೂ ಉಂಟು. ಇದು ಲಕ್ಷ್ಮೀಶನ ಜೈಮಿನಿ ಭಾರತಕ್ಕೂ ಅನ್ವಯಿಸುತ್ತದೆ. ಒಂದು ಕಾವ್ಯ ಕೃತಿಯನ್ನು ಕಥನವಾಗಿಸುವ ಕೈಂಕರ್ಯ ಅಷ್ಟು ಸುಲಭದ ಮಾತಲ್ಲ, ಮೂಲ ಕೃತಿಗೆ ಪ್ರಾಮಾಣಿಕತೆ, ಬದ್ಧತೆ, ನಿರಂತರ ಅಧ್ಯಯನಶೀಲತೆ, ಸ್ವಚಿಂತನೆಗಳ, ವಾಚಾಳಿತನಗಳ ನಿಯಂತ್ರಣ ಅನಿವಾರ್ಯ ಇಂತಹ ಅನುವಾದದ ಸಕಲ ಲಕ್ಷಣಗಳ ಸಾಹಿತ್ಯ ಪ್ರೇಮಿಯನ್ನು ಡಾ|| ಜಿ. ಕೃಷ್ಣಪರವರಲ್ಲಿ ಕಾಣಬಹುದು ಎಂದರೆ ಅತಿಶಯೋಕ್ತಿಯೆನಿಸದು. ಕಥಾ ಸಾಂದ್ರತೆಯಲ್ಲಿ ಮುಳುಗದೆ ಅದರ ಎಲ್ಲಾ ಲಯಗಳನ್ನು ಅನುವಾದ ಕೃತಿಯಲ್ಲಿ ಕಟ್ಟಿಕೊಡುವುದು ಒಬ್ಬ ಪ್ರತಿಭಾಶಾಲಿ, ಸಮರ್ಥ ವಿದ್ವಾಂಸನಿಗೆ ಮಾತ್ರ ಸಾಧ್ಯ. ಕಥೆಯ ನಿರೂಪಣೆಯಲ್ಲಾಗಲಿ, ಗದ್ಯಶೈಲಿಯ ಸರಸತೆಯಲ್ಲಾಗಲಿ, ಅವಲವಿಕೆಯಲ್ಲಾಗಲಿ ಕಥೆಯ ಓಟಕ್ಕೆ ಭಂಗ ಬರದಂತೆ ಎಚ್ಚರಿಕೆ ವಹಿಸಲಾಗಿದೆ. ಮೂಲ ಕಥಾವಸ್ತುವಿನ ಶರೀರವು ಎಲ್ಲಿಯೂ ಮುಕ್ಕಾಗದಂತೆ, ಸಾಮಾನ್ಯ ಓದುಗನಿಗೂ ಅದರಲ್ಲಿ ರುಚಿ ಹುಟ್ಟುವಂತೆ, ಮೂಲ ಕೃತಿಯ ಓದು ಹಾಗೂ ಅನುವಾದ ಕೃತಿಯ ಓದಿಗೂ ಸಾಮ್ಯತೆಗಳು ಹೆಚ್ಚಿರುವಂತೆ ಈ ಕೃತಿಯಿದೆ. ಇಲ್ಲಿಯತನಕ ಜೈಮಿನಿ ಭಾರತದ ವ್ಯಾಖ್ಯಾನಗಳು, ತಾತ್ಪರ್ಯಗಳ ಹಿನ್ನೆಲೆಯಲ್ಲಿ ಗ್ರಂಥಗಳು ರಚನೆಯಾಗಿವೆ. ಆದರೆ ಕಾವ್ಯ ಕೃತಿಯ ಕಥಾವಸ್ತುವನ್ನೇ ಮುಖ್ಯವಾಗಿರಿಸಿಕೊಂಡು ಗದ್ಯಶೈಲಿಗೆ ಸಮಗ್ರವಾಗಿ ತಂದುಕೊಟ್ಟಿರುವ ಶ್ರೇಯ ಕೃಷ್ಣಪ್ಪನವರ ಈ ಕೃತಿಗೆ ಸಲ್ಲುತ್ತದೆ. ಸರಳಗನ್ನಡವನ್ನೇ ಮೆಚ್ಚುವ ಇಂದಿನ ಪೀಳಿಗೆಗೆ 'ವಚನ ಜೈಮಿನಿ ಭಾರತ' ಉಪಯುಕ್ತ ಕೃತಿಯೆನಿಸಿದೆ.

Related Books