‘ಮಹಾಕವಿ ಮುದ್ದಣ’ ಕೃತಿಯು ಬೇಲೂರು ರಾಮಮೂರ್ತಿ ಕಾದಂಬರಿಯಾಗಿದೆ. ಇಲ್ಲಿ ಮಹಾಕವಿ ಮುದ್ದಣ್ಣನ ಕುರಿತ ವಿಚಾರಧಾರೆಗಳನ್ನು ಲೇಖಕ ಪ್ರಸ್ತುತಪಡಿಸಿದ್ದಾರೆ. ಕವಿಯ ಜೀವನ ಚಿತ್ರಣ, ಸಿದ್ದಾಂತ ಹಾಗೂ ಅವರ ಸಂಸಾರಿಕ ಬದುಕಿನ ಚಿತ್ರಣ ಇಲ್ಲಿದೆ. ಮುದ್ದಣ್ಣ ಮನೋರಮೆಯರ ಸಲ್ಲಾಪವೇ ಈ ಗ್ರಂಥದ ಮುಖ್ಯ ಭಾಗವೇ ಆಗಿ ಪ್ರಸಿದ್ದಿ ಪಡೆದಿದೆ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE