ಮಹಾನದಿ

Author : ವಿವೇಕಾನಂದ ಕಾಮತ್

Pages 220

₹ 140.00




Year of Publication: 2010
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: ನಂ. 134, 8ನೇ ಕ್ರಾಸ್, 4ನೇ ಮುಖ್ಯ ರಸ್ತೆ, ಗೋವಿಂದರಾಜನಗರ ಬೆಂಗಳೂರು – 560040

Synopsys

ಮಹಾನದಿ ಹೆಸರೇ ಸೂಚಿಸುವಂತೆ ತ್ಯಾಗಮಯಿ ಹೆಣ್ಣೊಬ್ಬಳ ಕಥೆ. ನಮ್ಮ ದೇಶದ ಮಹಾನದಿ ಗಂಗೆ. ಗಂಗೆಯಲ್ಲಿ ಮುಳುಗಿದರೆ ಪಾಪಗಳು ಕಳೆದಂತೆ ಎಂಬ ನಂಬಿಕೆ ಇದೆ. ನಾವು ಮುಳುಗಿ ನಮ್ಮ ಪಾಪವನ್ನು ಗಂಗೆಯಲ್ಲಿ ಬಿಟ್ಟು ಅವಳನ್ನು ಕಳಂಕಿತಳನ್ನಾಗಿಸುತ್ತೇವೆ. ನಮ್ಮ ಕಥಾನಾಯಕಿ ಗಂಗಾಳ ಪರಿಸ್ಥಿತಿಯೂ ಹಾಗೇ. ಅವಳ ಜೀವನ ಪ್ರವೇಶಿಸಿದವರೆಲ್ಲಾ ಅವಳಿಗೆ ಕಳಂಕ ಹಚ್ಚುತ್ತಾರೆ. ಗಂಗಾ ನಿಜವರ್ಥದಲ್ಲಿ ಮಹಾನದಿಯೆನಿಸಿಕೊಂದದ್ದು ಹೇಗೆ..? ಕರ್ಮವೀರ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books