ಮಹಾನಾಯಕ ಪ್ರಧಾನಸೇವಕ

Author : ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)

Pages 280

₹ 130.00




Year of Publication: 2017
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಮಹಾನಾಯಕ ಪ್ರಧಾನಸೇವಕ' ವ್ಯಕ್ತಿಚಿತ್ರಣದ ಪುಸ್ತಕವಿದು. ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿದ್ದಾರೆ. ನರೇಂದ್ರ ಮೋದಿಯವರನ್ನು ಸೋಲಿಸಲೆಂಬುದು ಮಹಾಘಟಬಂಧನದ ಎಲ್ಲಾ ನಾಯಕರದ್ದು ಒಂದೇ ಗುರಿ.  ಆದರೆ ಅವರಿಗೆ ಅರಿವಿರದ ಸಂಗತಿಯೊಂದಿದೆ. ಕೃಷ್ಣನ ವಿರುದ್ಧ ಕಾದಾಡಲು ಜರಾಸಂಧ ಪದೇ ಪದೆ ರಾಕ್ಷಸರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಬರುತ್ತಿದ್ದ. ಅದರ ಲಾಭ ಸಮಾಜಕ್ಕೇ ಆಯಿತು. ಕೊನೆಗೆ, ರಾಕ್ಷಸ ಸಂತಾನಗಳೆಲ್ಲಾ ನಷ್ಟವಾಗಿ ಜನರ ಬದುಕು ಹಸನಾಯ್ತು. ಧರ್ಮಯುದ್ಧದಲ್ಲಿ ಕೊನೆಯ ಜಯ ಕೃಷ್ಣನದ್ದೇ. ಈಗಲೂ ಅಷ್ಟೇ, ಮಹಾಘಟಬಂಧನದೊಂದಿಗೆ ಕದನ ನಡೆದಿರುವುದು ಮೋದಿಯವರದ್ದಲ್ಲ, ಬದಲಿಗೆ ಮಹಾಜನತೆಯದ್ದು ಎಂದು ಲೇಖಕರು ಈ ಕೃತಿಯ ಕುರಿತು ವಿವರಿಸಿದ್ದಾರೆ.

About the Author

ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)
(09 April 1980)

ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು.  ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ...

READ MORE

Related Books