ಮಹಾನಾಯಕನ ಮಹಾ ಕೊಡುಗೆಗಳು

Author : ಅಮ್ಮಸಂದ್ರ ಸುರೇಶ್

Pages 176

₹ 180.00




Year of Publication: 2022
Published by: ಎನ್.ಕೆ.ಎಸ್.ಪ್ರಕಾಶನ
Address: (ಪ್ರಕಾಶಕರು ಮತ್ತು ಪುಸ್ತಕ ವ್ಯಾಪಾರಿಗಳು), ನಂ.1393/3,ಸಿ.ಎಚ್-32, 6ನೇ ಕ್ರಾಸ್, ಕೃಷ್ಣಮೂರ್ತಿಪುರಂ, ಮೈಸೂರು- 570 004

Synopsys

ಲೇಖಕ ಅಮ್ಮಸಂದ್ರ ಸುರೇಶ್ ಅವರ ಕೃತಿ ‘ಮಹಾನಾಯಕ ಮಹಾ ಕೊಡುಗೆಗಳು’. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯಾಧ್ಯಕ್ಷರು ಸಿ.ವೆಂಕಟೇಶ್ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರು ಕೆ.ಎಸ್. ಶಿವರಾಮು ಅವರು ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ.

’ಡಾ. ಅಮ್ಮಸಂದ್ರ ಸುರೇಶ್‌ರವರ ನೂತನ ಕೃತಿ, ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಇವರು ಅಂಕಣಕಾರರಾಗಿ, ಮಾಧ್ಯಮ ವಿಶ್ಲೇಷಕರಾಗಿ ಮತ್ತು ಲೇಖಕರಾಗಿ ತಮ್ಮದೇ ಆದ ಓದುಗ ಬಳಗವೊಂದನ್ನು ಸೃಷ್ಟಿಸಿ ಕೊಂಡಿದ್ದಾರೆ. ಡಾ. ಚಿ.ಆರ್. ಅಂಬೇಡ್ಕರ್‌ರವರ ಕುರಿತು ಸಂಕುಚಿತವಾಗಿ ಚಿಂತಿಸುವವರಿಗೆ ಅಮ್ಮಸಂದ್ರ ಸುರೇಶ್ ಈ ಕೃತಿಯಲ್ಲಿ. ಉತ್ತಮವಾಗಿಯೇ ವಿವರಣೆಗಳನ್ನು ನೀಡುವ ಮೂಲಕ ಅಂಬೇಡ್ಕರ್ ಈ ಜಗತ್ತು ಕಂಡ ವಿಶ್ವಜ್ಞಾನಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಡಾ. ಅಮ್ಮಸಂದ್ರ ಸುರೇಶ್ ಅಂಬೇಡ್ಕರ್ ಅವರನ್ನು ಕುರಿತು ತಮ್ಮ ವಿದ್ಯಾರ್ಥಿ ದಿಸೆಯಿಂದಲೇ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇದುವರೆಗೂ ಬಾಬಾ ಸಾಹೇಬರ ಕುರಿತು ಮೂರು ಕೃತಿಗಳನ್ನು ಬರೆದಿದ್ದಾರೆ. ಇದು ಇವರ ನಾಲ್ಕನೆಯ ಕೃತಿ. ಭಾರತದ ಅಭಿವೃದ್ಧಿಗೆ ಅಂಬೇಡ್ಕರ್ ಅವರ ಕೊಡುಗೆಗಳನ್ನು ದಾಖಲಿಸುವ ಮತ್ತು ತಿಳಿಸುವ ಸ್ತುತ್ಯಾರ್ಹ ಕೆಲಸವನ್ನು ಅಮ್ಮಸಂದ್ರ ಸುರೇಶ್ ಈ ಕೃತಿಯ ಮೂಲಕ ಮಾಡಿದ್ದಾರೆ.ಡಾ. ಅಮ್ಮಸಂದ್ರ ಸುರೇಶ್, ಅಸಾಮಾನ್ಯ ಮತ್ತು ವಿಶೇಷ ವ್ಯಕ್ತಿತ್ವವುಳ್ಳ ಸಾಮಾಜಿಕ ಕಳಕಆಯ ಲೇಖಕ. ಅವರ ಲೇಖನ ಶೈಲಿ ಜನಪ್ರಿಯವಾಗಿದ್ದು, ಓದಿಸಿಕೊಂಡು ಹೋಗುವ ಗುಣದ ಜೊತೆಗೆ ಜ್ಞಾನದ ರಸದೌತಣವನ್ನು ಕೂಡ ಬಡಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತಾದ ಈ ಕೃತಿ ಒಳ್ಳೆಯ ಪರಾಮರ್ಶನ ಗ್ರಂಥವಾಗಿದೆ’ ಎಂಬುದಾಗಿ ಬೆನ್ನುಡಿಯ ಮಾತುಗಳಿವೆ.

About the Author

ಅಮ್ಮಸಂದ್ರ ಸುರೇಶ್

ಅಮ್ಮಸಂದ್ರ ಸುರೇಶ್  ಅವರು ಮೂಲತಃ  ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಅಮ್ಮಸಂದ್ರ ಪೂರೈಸಿ, ಪದವಿ (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಛಿಕ ಕನ್ನಡ)-ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರಿನಲ್ಲಿ, ಹಾಗೂ  ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲ  ಪೂರ್ಣಗೊಳಿಸಿದರು. ಪಿ,ಹೆಚ್ ಡಿಯನ್ನು   ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ...

READ MORE

Related Books