ಮಹಾಪ್ರಸ್ಥಾನ

Author : ಕೆ.ಎಸ್‍. ನಾರಾಯಣಾಚಾರ್ಯ

₹ 150.00




Published by: ಸಾಹಿತ್ಯ ಪ್ರಕಾಶನ
Address: ಕೊಪ್ಪೀಕರ್ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.

Synopsys

ಲೇಖಕ ಕೆ. ಎಸ್. ನಾರಾಯಣಾಚಾರ್ಯ ಅವರ ಪುರಾಣ‌ ವಿಮರ್ಶಾತ್ಮಕ ಕೃತಿ ʻಮಹಾಪ್ರಸ್ಥಾನʼ. ಪುಸ್ತಕವು ಮಹಾಭಾರತ ಕಾವ್ಯದಲ್ಲಿ ಬರುವ ಪಂಚಪಾಂಡವರ ಪತ್ನಿ ದ್ರೌಪದಿಯ ಕುರಿತು ಹೇಳುತ್ತದೆ. ಲೇಖಕರೇ ಹೇಳುವಂತೆ, “ಒಬ್ಬಳೇ ಹಿಂದೆ ಹಿಂದೆ ಅನುಸರಿಸುತ್ತಾ, ಪಾಂಡವರು ಮುಂದೆ ಮುಂದೆ ಸರಿಯುತ್ತಾ, ಇವಳ ಹೃದಯಾಳದ ನೋವಿನ ಪಾತಾಳಗರಡಿಯ ದರ್ಶನದಲ್ಲಿ ನನಗೆ ಅನೇಕ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತಿ, ಆಯಾಮಗಳನ್ನು ವಿವರಿಸುವ ಅವಕಾಶವೂ ಲಭ್ಯವಾಯ್ತು. ಏನು ಈ “ಸಶರೀರಸ್ವರ್ಗಪ್ರಾಪ್ತಿ” ಎಂದರೆ? ಧರ್ಮಜ ಹಾಗೆ ಆಶಿಸಿದ್ದು ಯುಕ್ತವೇ? ತಮ್ಮಂದಿರಿಗೆ, ಪತ್ನಿಗೆ ಬಲಾತ್ಕಾರ ‘ಆರೋಹಣವೇ?’ “ಎಲ್ಲಿಗೆ” ಎಂದರೆ, ತಿಳಿಯದವರಿಗೆ “ಸ್ವರ್ಗಾರೋಹಣದ ಬಲಾತ್ಕಾರವೇಕೆ? ಅದು ಅವರಿಗೆ ಸಾಧ್ಯವೂ ಆಗಲಿಲ್ಲವೆಂದಾದರೆ, ಧರ್ಮಜನಿಗೆ ಮುಂಚೆ ಏಕೆ ತಿಳಿಯಲಿಲ್ಲ? ಮೂಲ ಮಹಾಭಾರತದಲ್ಲಿ ಈ ಯಾವುದೂ ಸ್ಪಷ್ಟ ಉತ್ತರ ಪಡೆದಿಲ್ಲ. ನಮಗೆ, ಇಂದಿನವರಿಗೆ ಪ್ರಶ್ನೆ ತೀರುವುದಿಲ್ಲ! ಹೇಗೆ ಬಗೆಹರಿಸುವುದು? ಈ ದಿಸೆಯಲ್ಲೇ ಇಲ್ಲಿ ಕಥೆ, ಅದರ ಸೂತ್ರ ನಡೆಯುತ್ತದೆ.”.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books