ಮಹಾತ್ಮಾ ಗಾಂಧೀ ನನ್ನತಾತಾ (ಭಾಗ-2)

Author : ಲಲಿತಾಂಬ ಬಿ. ವೈ.

Pages 574

₹ 250.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಸುಮಿತ್ರ ಗಾಂಧಿ ಕುಲಕರ್ಣಿ ತಮ್ಮ ತಾತನೂ ಆಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕುರಿತು ಬರೆದ ಬರೆಹಗಳ ಎರಡನೇ ಅನುವಾದಿತ ಭಾಗ ಇದು. ಆತ್ಮೀಯ ಹಾಗೂ ವಸ್ತುನಿಷ್ಠ ನಿರೂಪಣೆ ಎರಡೂ ಕೃತಿಗಳ ಜೀವಾಳ.

ಸ್ವಾತಂತ್ಯ್ರ ನೀತಿ ನಿರೂಪಣೆಯು ಹೇಗೆ ನಡೆಯಿತು, ಸಬರಮತಿ ಆಶ್ರಮದ ಜೀವನ- ಶಿಸ್ತು, ಚಂಪಾರಣ್ಯದ ಕಾರ್ಯಗಳು, ಮಿಲ್ ಕಾರ್ಮಿಕರು ಮತ್ತು ಮಾಲೀಕರ ನಡುವೆ ಸಂಧಾನ, ಖೇಡಾ ಸತ್ಯಾಗ್ರಹ, ರೌಲಟ್ ಆಕ್ಟ್, ಗಾಂಧಿ ರಾಜಾಜಿ ಇವರ ಮೊದಲ ಭೇಟಿ, ಸ್ನೇಹ ಮತ್ತು ನಂತರದ ಕೌಟುಂಬಿಕ ಬಾಂಧವ್ಯ, ಜಲಿಯನ್ ವಾಲಾಬಾಗಿನ ಪ್ರಕರಣ, ಕಾಂಗ್ರೆಸ್, ಖಾದಿ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ದುಂಡುಮೇಜಿನ ಪರಿಷತ್ತು ಮುಂತಾದ ವಿಷಯಗಳ ಕುರಿತ ಆಪ್ತ ಮಾಹಿತಿ ಇದರಲ್ಲಿದೆ. 

About the Author

ಲಲಿತಾಂಬ ಬಿ. ವೈ.

ಲಲಿತಾಂಬ ಬಿ.ವೈ ಎಂ.ಎ ಹಿಂದಿ ಪದವೀಧರೆ. ಮೈಸೂರಿನವರು. ತಂದೆ ಭಾಸ್ಕರಂ ಯಜೇಶ್ವರ ಸೋಮಯಾಜಿ, ತಾಯಿ ಗೌರಮ್ಮ. ‘ತೀರ್ಥಂಕರ (ಮಕ್ಕಳ ಪುಸ್ತಕ), ಅಸ್ತಿತ್ವವಾದ, ನವನಿರ್ಮಾಣದೆಡೆಗೆ (ಅನುವಾದ). ‘ರಾಧಾಕೃಷ್ಣ ಭಕ್ತಿಕೋಶ, ವಚನೋದ್ಯಾನ, ಶತದಳ, ಭಾರತೀಯ ಉಪನ್ಯಾಸ ಕಥಾಸಾರ, ಭಾರತೀಯ ಕಹಾನಿಯಾ, ಶ್ರೇಷ್ಠ ಲಲಿತ ನಿಬಂದ್, ಶ್ರೇಷ್ಠ ಬಾಲ ಕಹಾನಿಯಾ’ ಇತ್ಯಾದಿ ಕೃತಿಗಳನ್ನು ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ.  1982ರಲ್ಲಿ ಕರ್ನಾಟಕ ಸರಕಾರದ ಪ್ರಶಸ್ತಿ,  1988ರಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಂತ್ರಾಲಯದ ಸಾಹಿತ್ಯ ಸೌಹಾರ್ದ ಸನ್ಮಾನ, 1996ರಲ್ಲಿ ಸಾಹಿತ್ಯ ಸಾಧನಾ ಸನ್ಮಾನ ಹಾಗೂ ಪಶ್ಚಿಮ ಬಂಗಾಳ ಒಟ್ಟು 14 ರಾಷ್ಟ್ರೀಯ ಸನ್ಮಾನಗಳಿಗೆ  ಭಾಜನರಾಗಿದ್ದಾರೆ.   ...

READ MORE

Related Books