ಮಹಿಳಾ ಅಧ್ಯಯನ ಪರಿಭಾಷೆ

Author : ಟಿ.ಆರ್‌. ಚಂದ್ರಶೇಖರ

Pages 148

₹ 75.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560109
Phone: 133 - 23183311, 23183312

Synopsys

ಮಹಿಳಾ ಅಧ್ಯಯನವು ಪ್ರವರ್ಧಮಾನಕ್ಕೆ ಬಂದ ಹಾಗೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಚರಿತ್ರೆ ಹೀಗೆ ಎಲ್ಲ ಜ್ಞಾನ ಶಿಸ್ತುಗಳನ್ನು ಸ್ತ್ರೀವಾದಿ ದೃಷ್ಟಿಯಿಂದ   ನೋಡುವ ಪ್ರಯತ್ನ ನಡೆದಿದೆ. ಈ ಎಲ್ಲ ಪ್ರಯತ್ನ ಮತ್ತು ಪ್ರಯೋಗಗಳ ಪರಿಣಾಮವಾಗಿ ಇಂದು ಸ್ತ್ರೀವಾದಿ ಪರಿಭಾಷೆಯೊಂದು ರೂಪುಗೊಂಡಿದೆ. ಲಿಂಗ ಸಂಬಂಧಿ ಪರಿಭಾಷೆಯ ತಾತ್ವಿಕ ಚೌಕಟ್ಟನ್ನು ಅರಿಯುವುದು, ಪರಿಕಲ್ಪನೆಗಳಿಗೆ ಬರಿಯ ಅರ್ಥ ನೀಡುವುದರ ಬದಲು ಮೂಲದಲ್ಲಿನ ಸಿದ್ಧಾಂತ, ಕಾಲಾನುಕ್ರಮದಲ್ಲಿ ಉಂಟಾಗುತ್ತಿರುವ ಅದರ ಅರ್ಥದಲ್ಲಿನ ಬದಲಾವಣೆಯ ನೆಲೆಗಳು, ಅದರ ಪ್ರಸ್ತುತ ಪಡೆದುಕೊಂಡಿರುವ ಅರ್ಥ ಮುಂತಾದ ಸಂಗತಿಗಳನ್ನು  ಕುರಿತು ’ಮಹಿಳಾ ಅಧ್ಯಯನ ಪರಿಭಾಷೆ’ ಎಂಬ  ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಮಹಿಳಾ ಅಧ್ಯಯನ ಪರಿಭಾಷೆಯ ಮಾಲೆಯಡಿಯಲ್ಲಿ ಈ ಕೃತಿಯನ್ನು ಹೊರತರಲಾಗಿದೆ.

About the Author

ಟಿ.ಆರ್‌. ಚಂದ್ರಶೇಖರ
(07 April 1951)

ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್‌. ಚಂದ್ರಶೇಖರ್‌ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...

READ MORE

Related Books