ಮಹಿಳಾ ಸಬಲೀಕರಣ ಮತ್ತು ಕನ್ನಡ ದಿನಪತ್ರಿಕೆಗಳು

Author : ಓಂಕಾರ ಕಾಕಡೆ

Pages 186

₹ 125.00




Year of Publication: 2005
Published by: ಕರ್ನಾಟಕ ಮಾಧ್ಯಮ ಅಕಾಡೆಮಿ
Address: ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಟವರ್, ಡಾ. ಬಿ.ಆರ್. ಅಂಬೇಡ್ಕರ್ ಬೀದಿ, ಬೆಂಗಳೂರು-560001
Phone: 08022860164

Synopsys

ಡಾ. ಓಂಕಾರ ಕಾಕಡೆ ಅವರ ಕೃತಿ-‘ಮಹಿಳಾ ಸಬಲೀಕರಣ ಮತ್ತು ಕನ್ನಡ ದಿನಪತ್ರಿಕೆಗಳು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಫೆಲೋಶಿಪ್ ಯೋಜನೆ (2007) ಅಡಿಯಲ್ಲಿ ನಡೆದ ಅಧ್ಯಯನ ವಿಷಯಗಳು ಕೃತಿಯಲ್ಲಿವೆ. ಮಹಿಳೆಯರ ಸ್ಥಿತಿ-ಗತಿ, ಮಹಿಳಾ ಸಬಲೀಕರಣ, ಮಾಧ್ಯಮಗಳು ಮತ್ತು ಮಹಿಳಾ ಸಬಲೀಕರಣ, ಮುದ್ರಣ ಮಾಧ್ಯಮ, ಕನ್ನಡ ಪತ್ರಿಕೋದ್ಯಮ, ಮಹಿಳಾ ಸಬಲೀಕರಣ-ಕನ್ನಡ ದಿನಪತ್ರಿಕೆಗಳು -ಇಲ್ಲಿಯ ಪ್ರಮುಖ ಅಧ್ಯಾಯಗಳಾಗಿ ಚರ್ಚೆಗೊಳಗಾಗಿವೆ.

ಮಹಿಳೆಯರ ಸಕಾರಾತ್ಮಕ ಸಾಧನೆಗಳಿದ್ದರೂ ನಕಾರಾತ್ಮಕ ಚಿತ್ರಣವಾಗಿ ಇಂದಿನ ಮುದ್ರಣ ಮಾಧ್ಯಮದಲ್ಲಿ ವಿಜೃಂಭಿಸುತ್ತಿವೆ ಎಂಬ ವಿಷಾದವೂ, ಪತ್ರಿಕೆಗಳು ವ್ಯಾಪಾರೀಕರಣವಾಗುತ್ತಿರುವ ನಡೆಯ ಧೋರಣೆ, ಮಹಿಳೆಯರ ಅಡುಗೆ ಮನೆಗೆ ಸೀಮಿತವಾಗಿಸುವ ಪುರುಷ ಪ್ರಧಾನ ಮನೋಭಾವ ಇಂದಿಗೂ ಮುಂದುವರಿಯುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗೆ ಈ ಕೃತಿ ಅವಕಾಶ ನೀಡುತ್ತದೆ. ಪ್ರತಿ ಅಧ್ಯಾಯವು ಅಂಕಿ-ಸಂಖ್ಯೆಗಳ ದಾಖಲೆಸಹಿತ ವಿಷಯದ ಮಂಡನೆ ಇದ್ದು, ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.

About the Author

ಓಂಕಾರ ಕಾಕಡೆ

ಪ್ರೊ. ಓಂಕಾರ ಕಾಕಡೆ ಅವರು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳು. ಈ ಮುಂಚೆ ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದರು. ವಿ.ವಿ.ಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ನೇಮಕವಾಗುವ ಮುನ್ನ ಅವರು ಪ್ರಜಾವಾಣಿಯಲ್ಲಿ (2001-03) ಬೆಳಗಾವಿ ಹಾಗೂ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು.  ಕೃತಿಗಳು: ಲಿಜಂಡರ್ ಆ್ಯಂಡ್ ಹ್ಯೂಮನ್ ರೈಟ್ಸ್ಳಿ (ಸಂಪಾದಕತ್ವ). ಮಹಿಳಾ ಸಬಲೀಕರಣ ಮತ್ತು ಕನ್ನಡ ದಿನಪತ್ರಿಕೆಗಳು ಇತ್ಯಾದಿ. ...

READ MORE

Related Books