ಮಹಿಳೆ ಅಂದು ಇಂದು

Author : ಜ್ಯೋತ್ಸ್ನಾ ಕಾಮತ್

Pages 130

₹ 50.00




Year of Publication: 2001
Published by: ಪ್ರೇಮಸಾಯಿ ಪ್ರಕಾಶನ
Address: ಗುರುಪ್ರಸಾದ, #845, 4ನೇ ಮುಖ್ಯ ರಸ್ತೆ, ವಿಜಯನಗರ ಬೆಂಗಳೂರು- 560040
Phone: 3301822

Synopsys

‘ಮಹಿಳೆ ಅಂದು ಇಂದು’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ಪ್ರಬಂಧಗಳ ಸಂಕಲನವಾಗಿದೆ. ಈ ಕೃತಿಯಲ್ಲಿ 9 ಲೇಖನಗಳಿವೆ. ಮನುಸ್ಮೃತಿ ಮತ್ತು ಮಹಿಳೆ, ಶತಮಾನಗಳಲ್ಲಿ ಕನ್ನಡತಿ, ಕನ್ನಡತಿ ಮತ್ತು ಲಲಿತಕಲೆಗಳು, ಆದಿವಾಸಿ ಮಹಿಳೆಯರು, ಅಂಬಿಕಾತನಯದತ್ತರ ಸ್ತ್ರೀ ದೃಷ್ಠಿಕೋನ, ಮಹಿಳೆ ಮತ್ತು ಕಾನೂನು ರಕ್ಷಕರು, ಬಾನುಲಿ ಮತ್ತು ನಾರೀಜಾಗೃತಿ, ಮಹಿಳೆ: ಉದ್ಯೋಗ-ಗೃಹಕೃತ್ಯಗಳ ನಡುವೆ, ಸ್ತ್ರೀ ಸಮಾನತೆ: ಒಂದು ವಿವೇಚನೆಗಳನ್ನು ಒಳಗೊಂಡಿದೆ. ಲೇಖಕಿ ಜ್ಯೋತ್ಸ್ನಾ ಕಾಮತ್ ಅವರು, ತಮ್ಮ ಕಾವ್ಯ ಹಾಗೂ ಜೀವನದಲ್ಲಿ ಅ೦ಬಿಕಾತನಯದತ್ತರು ಸ್ತ್ರೀ ರೂಪವನ್ನು ಕಂಡುಕೊಂಡ ಬಗೆ ಅನನ್ಯವಾದದ್ದು. ಅಮೋಘ ವಾದದ್ದು, ತನ್ನ ಮುತ್ತಜ್ಜಿ, ಅಜ್ಜಿ, ತಾಯಿಯಲ್ಲಿ ಅಸಾಧಾರಣ ಪೌರುಷ ಗುರುತಿಸಿದರು. ಮತ್ತು ಹಲವು ರೂಪಗಳಲ್ಲಿ ನಾರೀ ಶಕ್ತಿಯನ್ನು ಕಂಡು 'ಆರಾಧಿಸಿದರು. ಕೆಲವನ್ನು ಗುರುತಿಸುವ ಸಾಹಸ, ಅಂಬಿಕಾತನಯದತ್ತರ ಸ್ತ್ರೀ ದೃಷ್ಟಿಕೋನ' ದಲ್ಲಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಕಾನೂನು ರಕ್ಷಕರೇ ಮಹಿಳೆಯರಿಗೆ ರಕ್ಷಣೆಯೀಯುವ ಬದಲು ಅನ್ಯಾಯ ಎಸಗುವ ಘಟನೆಗಳನ್ನು ಪ್ರತಿದಿನ ಕಾಣುತ್ತೇವೆ. ಜೊತೆಗೆ,  ಮಹಿಳೆಯರು ಹೆಚ್ಚಿನ ಹೊಣೆ, ಸ್ತೈರ್ಯಗಳನ್ನು ತೋರುತ್ತಿಲ್ಲ. ಅವರು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ, ಮಹಿಳೆ ಮತ್ತು ಕಾನೂನು ರಕ್ಷಕರು ಲೇಖನದಲ್ಲಿದೆ. ಬಾನುಲಿಯಂತಹ ಪ್ರಬಲ, ಚಲನಶೀಲ ಅಗ್ಗದ ಮಾಧ್ಯಮ ನಾರಿಯಲ್ಲಿ ಅರಿವು ಬೆಳೆಸುವ ಮುಖ್ಯ ಸಾಧನವಾಗಬಲ್ಲದು ಎಂಬುದನ್ನು ‘ಬಾನುಲಿ ಮತ್ತು ಮಹಿಳಾ ಜಾಗೃತಿ ಯಲ್ಲಿ ತೋರಿಸಿದರೆ, ಗೃಹಕೃತ್ವ ಹಾಗೂ ವೃತ್ತಿಗಳಲ್ಲಿ ಮಹಿಳೆಯರ ಪಾತ್ರವನ್ನು ಸ್ವಾನುಭವದ ಹಿನ್ನೆಲೆಯಲ್ಲಿ ಎಂಟನೆಯ ಅಧ್ಯಾಯದಲ್ಲಿ ಬಿಂಬಿಸಲು ಪ್ರಯತ್ನಿಸಿರುವೆ. ಮಾನಸಿಕವಾಗಿ ಸ್ತ್ರೀ-ಪುರುಷರಿಬ್ಬರೂ  ಬೆಳೆಯದ ಹೊರತು ಸ್ತ್ರೀ-ಪುರುಷ ಸಮಾನತೆಯೆಂಬುದು ಮರೀಚಿಕೆ! ಎಂಬ ಅನಿಸಿಕೆಯು ಕೊನೆಯ ಪ್ರಬಂಧದಲ್ಲಿದೆ’ ಎಂದಿದ್ದಾರೆ.

About the Author

ಜ್ಯೋತ್ಸ್ನಾ ಕಾಮತ್
(24 January 1937 - 24 August 2022)

ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...

READ MORE

Related Books