ಮಹಿಳೆ ಮತ್ತು ದೇಹರಾಜಕಾರಣ

Author : ಭಾರತೀದೇವಿ ಪಿ.

Pages 70

₹ 100.00




Year of Publication: 2019
Published by: ಕರ್ನಾಟಕ ಸಂಘ
Address: ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರ, ಮಂಡ್ಯ.
Phone: 08232227755

Synopsys

ಲೇಖಕಿ ಪಿ. ಭಾರತಿ ದೇವಿ ಅವರ ಚಿಂತನೆಯ ಮೂಸೆಯಲ್ಲಿ ಆಕಾರ ಪಡೆದ ಕೃತಿ-ಮಹಿಳೆ ಮತ್ತು ದೇಹ ರಾಜಕಾರಣ.ಸಮಾಜ-ಸಂಸ್ಕೃತಿ, ವಿಧಿ ನಿಷೇಧಗಳ ಮಧ್ಯೆ ತನ್ನತನವನ್ನು ಕಂಡುಕೊಳ್ಳುವ ಹಾದಿಯಲ್ಲಿ ಹೆಣ್ಣು ಪ್ರತಿನಿತ್ಯ ಅಗ್ನಿದಿವ್ಯವನ್ನು ಎದುರಿಸಬೇಕಾಗುತ್ತದೆ. ತನ್ನ ಇಚ್ಛೆಯ ಬಟ್ಟೆ, ತನ್ನಿಚ್ಛೆಯ ಆಹಾರ, ತನ್ನಿಚ್ಛೆಯ ಸಂಗಾತಿ ಹೀಗೆ ಪ್ರತಿಯೊಂದನ್ನೂ ಹೋರಾಟದ ಭಾಗವಾಗಿಯೇ ಅವಳು ದಕ್ಕಿಸಿಕೊಳ್ಳಬೇಕು. ತನ್ನ ವೈಶಿಷ್ಟ್ಯವನ್ನು ಒಪ್ಪಿಕೊಳ್ಳುವುದು, ತನ್ನತನದ ಹುಡುಕಾಟ ಮತ್ತು ಪ್ರತಿರೋಧ ಇವೆರಡೂ ಜೊತೆಜೊತೆಗೆ ಸಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಈ ಕೃತಿಯು ಮಹಿಳಾ ಅಸ್ಮಿತೆಯನ್ನು ಕಟ್ಟಿಕೊಡುವ ಕೃತಿಯಾಗಿದೆ.

About the Author

ಭಾರತೀದೇವಿ ಪಿ.
(19 March 1983)

ಲೇಖಕಿ, ಅಂಕಣಕಾರ್ತಿ ಭಾರತೀದೇವಿ ಪಿ. ಅವರು ಮೂಲತಃ ಮೂಡುಬಿದರೆಯವರು. 1983 ಮಾರ್ಚ್ 19 ರಂದು ಜನಿಸಿದ ಭಾರತೀದೇವಿಯವರು ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದರೆಯಲ್ಲಿಯೇ ಪೂರ್ಣಗೊಳಿಸಿದರು. ಆನಂತರ ಉಜಿರೆ ಹಾಗೂ ಚೆನ್ನೈನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಅವರು ಪ್ರಸ್ತುತ ಹಾಸನದ ಹೊಳೆನರಸೀಪುರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಭಾರತೀದೇವಿ ಅವರು ನಿಲ್ಲಿಸಬೇಡ ಯಾವುದನ್ನು, ಪಿಯರ್ ಬೋರ್ದು ವಿಚಾರಗಳು, ಮಹಿಳೆ ಮತ್ತು ದೇಹರಾಜಕಾರಣ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಆಂದೋಲನಯ ಪತ್ರಿಕೆಗೆ ಅಂಕಣಗಳನ್ನೂ ಬರೆಯುತ್ತಾರೆ . ಸಾಹಿತ್ಯ ಕ್ಷೇತ್ರದ ಅವರ ಸಾಧನೆಗಳಿಗೆ ...

READ MORE

Related Books