ಮಹಿಳೆ ಮತ್ತು ಖಾಸಗೀತನ

Author : ಅನಸೂಯ ಕಾಂಬಳೆ

Pages 252

₹ 280.00




Year of Publication: 2023
Published by: ಸಂಗಾತ ಪುಸ್ತಕ
Address: ಸಂಗಾತ ಪುಸ್ತಕ , ಗಜೇಂದ್ರಗಡ್ ತಾಲ್ಲೂಕು, ಗದಗ್ ಜಿಲ್ಲೆ, ಪೋಸ್ಟ್ ರಾಜೂರ್ – 582114.
Phone: 9341757653

Synopsys

ಅನಸೂಯ ಕಾಂಬಳೆ ಮತ್ತು ಪ್ರಶಾಂತ ಹೆಚ್.ವೈ. ಸಂಪಾದಿಸಿರುವ ‘ಮಹಿಳೆ ಮತ್ತು ಖಾಸಗೀತನ’ ಕೃತಿಯ ಕುರಿತು ರಘುನಾಥ ಚ.ಹ.ಅವರು ಬರೆದ ಬೆನ್ನುಡಿ ಮಾತುಗಳು ಸಮ ಸಮಾಜದ ಹಂಬಲದಲ್ಲಿ ರೂಪುಗೊಂಡ ಸಂವಿಧಾನವನ್ನು ಅಂಗೀಕರಿಸಿ ಏಳು ದಶಕಗಳು ಕಳೆದ ನಂತರವೂ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುವ ಘಟನೆಗಳು ವರದಿಯಾಗುತ್ತಲೇ ಇವೆ. ಪೂಜ್ಯ ಭಾವದಲ್ಲಿ ಹೆಣ್ಣನ್ನು ನೋಡುವ ಮನೋಭಾವ, ಆತ್ಮಗೌರವವನ್ನು ಹೆಚ್ಚಿಸುವ ಬದಲಾಗಿ, ಆಕೆಯನ್ನು ಭಾವುಕ ಚೌಕಟ್ಟಿನೊಳಗೆ ನಿರ್ಬಂಧಿಸುವ ಪ್ರಯತ್ನವಾಗಿ ಉಳಿದಿರುವುದೇ ಹೆಚ್ಚು. ಸಮ ಸಮಾಜದ ಹಂಬಲದ ನಮ್ಮ ಬಹುತೇಕ ಮಾತು-ಕೃತಿಗಳ ಆಳದಲ್ಲಿ ಪುರುಷ ಮೇಲರಿಮೆಯೇ ಇರುವುದು ಹಾಗೂ ಅದನ್ನು ಮೀರುವುದು ನಮಗೆ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ಸ್ತ್ರೀ ಸಮಾನತೆ ಹಾಗೂ ಸಮ ಸಮಾಜದ ಆಶಯ ಸಾಕಾರಗೊಳಿಸುವ ಏಕಮಾತ್ರ ಬೆಳಕು ಮಾತೃತ್ವಗುಣದ ಸಂವಿಧಾನವೇ ಆಗಿದೆ. ಸ್ತ್ರೀ ಸಮಾನತೆ ಹಾಗೂ ಅದರ ಮೂಲಕ ಆರೋಗ್ಯಕರ ಸಮಾಜ ರೂಪುಗೊಳ್ಳುವುದಕ್ಕೆ ಸಂವಿಧಾನವಷ್ಟೇ ಕಾವು ಮತ್ತು ಬೆಳಕು ಎರಡೂ ಆಗಿದೆ. ಈ ಅರಿವನ್ನು ವಿವಿಧ ಆಯಾಮಗಳಲ್ಲಿ ಮನವರಿಕೆ ಮಾಡಿಕೊಡುವ ವಿಶಿಷ್ಟ ಕೃತಿ, ‘ಮಹಿಳೆ ಮತ್ತುಖಾಸಗೀತನ’. ಸ್ತ್ರೀ ವಾದದ ವಿಸ್ತರಣಾ ನೆಲೆಗಳೆಂದು ಈ ಕೃತಿಯನ್ನು ಸಂಪಾದಕರು ಕರೆದಿದ್ದರೂ, ಇದು ಮಾನವತಾವಾದದ ಅನುಸಂಧಾನವೇ ಆಗಿದೆ. ಸ್ತ್ರೀ ವಾದ ಮತ್ತು ಮಾನವತಾವಾದ ಎರಡೂ ಅಭಿನ್ನ ಎನ್ನುವ ಸತ್ಯಕ್ಕೆ ಸಂಕಲನದ ಅನೇಕ ಬರಹಗಳು ಅಡಿಗೆರೆ ಎಳೆಯುತ್ತವೆ. ಇಲ್ಲಿನ ಬರಹಗಳು ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವಂತಿವೆ, ಮನಸ್ಸನ್ನು ಆರ್ದ್ರಗೊಳಿಸುವಂತಿವೆ ಹಾಗೂ ಸ್ತ್ರೀ ಸಂವೇದನೆಯನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಲು ಒತ್ತಾಯಿಸುತ್ತವೆ; ಬದಲಾಗದ ಮನಸ್ಥಿತಿಯ ಬಗ್ಗೆ ವಿಷಾದ ಹುಟ್ಟಿಸುತ್ತಲೇ, ಬದಲಾವಣೆಗೆ ಒತ್ತಾಸೆಯಾಗಿರುವ ‘ಸಂವಿಧಾನ ಬಲ’ವನ್ನು ಮುನ್ನೆಲೆಗೆ ತರುತ್ತವೆ. ಮಹಿಳಾ ಸಮಸ್ಯೆಗಳ ಕುರಿತ ಇಲ್ಲಿನ ಚರ್ಚೆ, ಹೆಣ್ಣುಮಕ್ಕಳ ತವಕ ತಲ್ಲಣಗಳ, ಸಂಕಷ್ಟಗಳ ಚರ್ಚೆಯಾಗಿಯಷ್ಟೇ ಉಳಿಯದೆ - ಸಮಾಜದ ತರತಮಗಳಿಗೆ, ತಳಮಳಗಳಿಗೆ ಹಾಗೂ ಆರ್ಥಿಕ ಅಸಮಾನತೆಗೆ ಕಾರಣಗಳನ್ನು ಶೋಧಿಸುವ ಪ್ರಯತ್ನವೂ ಆಗಿದೆ. ಇಲ್ಲಿರುವುದು ಸಮಸ್ಯೆಗಳನ್ನು ಪಟ್ಟಿಮಾಡುವ ಅಥವಾ ಆ ಸಮಸ್ಯೆಗಳನ್ನು ಯಾರ ತಲೆಗಾದರೂ ಕಟ್ಟುವ ಮನೋಭಾವವಲ್ಲ. ನಮ್ಮನ್ನು ನಾವು ಒರೆಗೆ ಹಚ್ಚಿಕೊಳ್ಳುತ್ತ, ಅವಜ್ಞೆಯಿಂದಲೋ ತಪ್ಪುಗ್ರಹಿಕೆಗಳಿಂದಲೋ ಕಿಲುಬುಗಟ್ಟಿರುವ ಮನಸ್ಸುಗಳನ್ನು ತಿಳಿಯಾಗಿಸುವ ಪ್ರಯತ್ನಇಲ್ಲಿರುವುದು. ಸಾಗಬೇಕಾದದಾರಿಗೆ ಕಂದೀಲುಗಳನ್ನು ಒದಗಿಸುವ ಹಂಬಲದ ಕೃತಿಯಿದು.

About the Author

ಅನಸೂಯ ಕಾಂಬಳೆ
(28 December 1970)

ಅನಸೂಯ ಕಾಂಬಳೆ ಅವರು ದಲಿತ ಮಹಿಳಾ ಸಂವೇದನೆಯ ಕನ್ನಡದ ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರು. 1970ರ ಡಿಸೆಂಬರ್ 28 ರಂದು ಜನಿಸಿದ ಅನಸೂಯ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಮಲಾಪೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.’ಬರಗೂರರ ಕಾದಂಬರಿಗಳು : ಒಂದು ಅಧ್ಯಯ’ ಎಂಬ ಪ್ರಬಂಧ ಸಲ್ಲಿಸಿ ಎಂ.ಫಿಲ್ ಪದವಿ ಮತ್ತು ’ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ' ಎಂಬ ಕಾವ್ಯವನ್ನು ಅನುಲಕ್ಷಿಸಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್. ಡಿ. ಪದವಿ ಪಡೆದಿದ್ದಾರೆ ಮುಳ್ಳು ಕಂಟಿಯ ನಡುವೆ (ಕವನ ಸಂಕಲನ), ...

READ MORE

Related Books