ಮಹಿಳೆ ಮತ್ತು ಪತ್ರಿಕೆ

Author : ಎಂ. ಉಷಾ

Pages 30

₹ 10.00




Year of Publication: 1999
Published by: ಪ್ರಸಾರಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276

Synopsys

ಸ್ವಾತಂತ್ರ್ಯ ಪೂರ್ವದ ಪತ್ರಿಕಾಧರ್ಮದ ಪ್ರಧಾನ ಆಸಕ್ತಿಗಳಲ್ಲಿ ಮಹಿಳಾಪರ ಸುಧಾರಣೆಗಳೂ ಮುಖ್ಯವಾಗಿತ್ತು. ಈ ಆಸಕ್ತಿಯ ಫಲವಾಗಿ ಮಹಿಳೆಯರಿಗಾಗಿ ಅಂಕಣಗಳನ್ನು ನಿರ್ಮಿಸುವ ಮತ್ತು ಅಂಕಣಗಳನ್ನು ಸಾಧ್ಯವಾದಷ್ಟು ಅವರೇ ನಿರ್ವಹಿಸುವ ಇತ್ಯಾದಿ ನೆಲೆಯವರೆಗೆ ಪತ್ರಿಕೆ ಮತ್ತು ಮಹಿಳೆಯ ಸಂಬಂಧವು ವಿಸ್ತಾರಗೊಂಡಿತ್ತು. ಈ ವಿಸ್ತರಣೆಯ ಮುಂದುವರಿಕೆಯಾಗಿ ತಿರುಮಲಾಂಬ, ಕಲ್ಯಾಣಮ್ಮ, ಆರ್‌. ಶ್ಯಾಮಲಾದೇವಿ ಮುಂತದವರು ಸಂಪಾದಕಿಯರಾಗಿ ಪತ್ರಿಕೆಯನ್ನು ನಿರ್ವಹಿಸುವ ಅವಕಾಶವನ್ನು ಪಡೆದುಕೊಂಡರು. ಹೀಗೆ ಹಂತಹಂತವಾಗಿ ಬೆಳೆದುಬಂದ ಪತ್ರಿಕೆಯೊಂದಿಗಿನ ಮಹಿಳೆಯರ ಸಂಬಂಧವನ್ನು ಈ ಕೃತಿಯಲ್ಲಿ ಗುರುತಿಸಲಾಗಿದೆ.

About the Author

ಎಂ. ಉಷಾ
(12 May 1967)

ಲೇಖಕಿ, ಅನುವಾದಕಿ ಎಂ. ಉಷಾ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. 1967 ಮೇ 12 ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ. ಸಾಹಿತ್ಯ, ವಿಮರ್ಶೆ, ಆಧುನಿಕ ಪೂರ್ವ ಸಾಹಿತ್ಯ ಮತ್ತು ಇತಿಹಾಸ ವಿಷಯದಲ್ಲಿ ಆಸಕ್ತಿ. ಅನೇಕ ಗ್ರಂಥಗಳನ್ನು ಅನುವಾದಿಸಿದ್ದಾರೆ. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪತ್ರಿಕೆ ಮತ್ತು ಮಹಿಳೆ, ಭಾರತೀಯ ಸ್ತ್ರೀವಾದ ಮತ್ತು ಸಂಸ್ಕೃತಿ ಚಿಂತನೆ, ಮಹಿಳೆ ಮತ್ತು ಜಾತಿ, ಮಹಿಳಾ ಅಧ್ಯಯನ, ಆಧುನಿಕ ಮಹಿಳಾ ಸಾಹಿತ್ಯ, ಭಾಷಾಂತರ ಮತ್ತು ಲಿಂಗ ರಾಜಕಾರಣ, ಭಾಷಾಂತರ ಪ್ರವೇಶಿಕೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಶೂಲಿ ...

READ MORE

Related Books