ಮೈಲಾರ

Author : ಸಿ. ಮಹದೇವ

Pages 138

₹ 80.00




Year of Publication: 2012
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಕರ್ನಾಟಕದಲ್ಲಿ ವಿವಿಧ ಚಾರಿತ್ರಿಕ ಕಾಲಘಟ್ಟಗಳಲ್ಲಿ ಬೇರೆ, ಬೇರೆ ಪಂಥ, ಸಂಪ್ರದಾಯಗಳು ಹುಟ್ಟಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿರುವುದನ್ನು ಕಾಣುತ್ತೇವೆ. ಅವುಗಳಲ್ಲಿ ಮೈಲಾರ ಸಂಪ್ರದಾಯವೂ ಒಂದು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರವು ಹಿರೇಮೈಲಾರ, ಮಣ್ಮೈಲಾರ, ಉಂಗುರಾಲಕ್ಷೇತ್ರ ಎಂಬ ಹೆಸರುಗಳಿಂದ ಗುರುತಿಸಿಕೊಂಡು ತನ್ನದೇ ಆದ ಸಾಂಸ್ಕೃತಿಕ ಮಹತ್ವ ಪಡೆದು ಕೊಂಡಿದೆ.. 

ಮೈಲಾರ ಸಂಪ್ರದಾಯ ಕುರಿತಂತೆ ವ್ಯಾಪಕವಾಗಿ ಸಂಶೋಧನಾತ್ಮಕ ಅಧ್ಯಯನಗಳಿವೆ. ಅಂದರೆ ಮಹಾರಾಷ್ಟ್ರದಲ್ಲಿ ಮೈಲಾರನು ಖಂಡೋಬಾ ಎಂಬ ಹೆಸರಿನಿಂದ ಪ್ರಸಿದ್ಧ ಹೊಂದಿದ್ದು, ಮರಾಠಿಗರ ಕುಲದೇವರಾಗಿದೆ. ಕರ್ನಾಟಕದಲ್ಲಿ ಮೈಲಾರ ದೇವರ ಕ್ಷೇತ್ರಗಳಾಗಿ ಹಿರೇಮೈಲಾರ ಮತ್ತು ದೇವರಗುಡ್ಡ ಕ್ಷೇತ್ರಗಳು ಪ್ರಮುಖವಾಗಿವೆ. ಇವುಗಳಲ್ಲಿ ಹಿರೇಮೈಲಾರ ಅಥವಾ ಮೈಲಾರವು ಪ್ರಮುಖ ಕೇಂದ್ರವೆಂಬ ಸಾಮಾನ್ಯ ಅಭಿಪ್ರಾಯವಿದೆ.

ವಿಜಯನಗರ ಕಾಲದ ಶಾಸನವೊಂದು ಮೈಲಾರ ಕ್ಷೇತ್ರವನ್ನು ಹಿರಿಯ ಮೈಲಾರ ಎಂದು ಕರೆದಿದೆ. ಈ ಕೃತಿಯಲ್ಲಿ ಮೈಲಾರ ಸಂಪ್ರದಾಯವನ್ನು ವಿವೇಚಿಸುವ ಜೊತೆಗೆ ವಿವಿಧೆಡೆ ಇರುವ ಮೈಲಾರದೇವರ ದೇವಾಲಯಗಳು, ಮೂರ್ತಿಶಿಲ್ಪಗಳು, ಆಚರಣೆಗಳು ಮೌಖಿಕ ಆಕರಗಳು ಹಾಗೂ ಶಾಸನಗಳನ್ನು ಸಂಗ್ರಹಿಸಿದ್ದು, ಅಧ್ಯಯನದ ಮಹತ್ವಪೂರ್ಣ ಕೃತಿ ಇದು.

 

About the Author

ಸಿ. ಮಹದೇವ

ಡಾ.ಸಿ.ಮಹದೇವ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.”ಮೈಲಾರ’ ಕೃತಿಯು ಸಾಂಪ್ರದಾಯಿಕ ಹಬ್ಬ-ಆಚರಣೆ-ಜಾತ್ರೆ-ಉತ್ಸವಗಳ ಅಧ್ಯಯನಕ್ಕೆ ಈ ಕೃತಿ ಆಕರ ಗ್ರಂಥವಾಗಿದೆ.  ...

READ MORE

Related Books