ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ

Author : ಶಮಂತಕಮಣಿ ನರೇಂದ್ರನ್

Pages 102

₹ 60.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಮಕ್ಕಳಲ್ಲಿ ಕಂಡುಬರುತ್ತಿರುವ ಹಲವಾರು ದೈಹಿಕ ಮತ್ತು ಮಾನಸಿಕ ಕುಂದುಕೊರತೆಗಳನ್ನು ಅವುಗಳ ಬಗ್ಗೆ ಪೋಷಕ ಸಮುದಾಯ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮವನ್ನು ’ಡಾ. ಶಮಂತಕಮಣಿ ನರೇಂದ್ರನ್’ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ವೈದ್ಯಕೀಯ ದೃಷ್ಟಿಯಿಂದ ‘ನಮಗೆಂಥ ಮಕ್ಕಳು ಬೇಕು’ ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಈ ಕೃತಿಯೂ ಮಕ್ಕಳನ್ನು ಪೀಡಿಸುವ ರೋಗಗಳ ಬಗ್ಗೆ ರಚನೆಯಾದ ಕೃತಿಯಲ್ಲ, ಬದಲಾಗಿ ಮಕ್ಕಳಲ್ಲಿ ಕಂಡುಬರುತ್ತಿರುವ ಹಲವಾರು ದೈಹಿಕ ಮತ್ತು ಮಾನಸಿಕ ಕುಂದುಕೊರತೆಗಳ ಬಗ್ಗೆ ತೆಗೆದು ಕೊಳ್ಳಬೇಕಾದ ಎಚ್ಚರಿಕೆಯ ವಿಷಯಗಳ ಕುರಿತು, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ.

About the Author

ಶಮಂತಕಮಣಿ ನರೇಂದ್ರನ್

ಶಮಂತಕಮಣಿ ನರೇಂದ್ರನ್ ಸಿ ಅವರು ವೃತ್ತಿಯಲ್ಲಿ ವೈದ್ಯರು. ಎಂ.ಬಿ.ಬಿ.ಎಸ್., ಎಂ.ಡಿ. (ಪೀಡಿಯಾಟಿಕ್) ಡಿಸಿಎಚ್ (ಲಂಡನ್ ರಾಯಲ್ ಕಾಲೇಜ್) ಎಂ.ಎ. (ಕನ್ನಡ), ಎಂ.ಎ. (ತತ್ತ್ವಶಾಸ್ತ್ರ) ಪತ್ರಿಕೋದ್ಯಮ ಡಿಪ್ಲೊಮಾ ಪದವಿಗಳನ್ನು ಪಡೆದಿದ್ದಾರೆ. ಜನಿಸಿದ್ದು ೧೬-೯-೧೯೩೦, ಶಿವಮೊಗ್ಗ ಜಿಲ್ಲೆಯಲ್ಲಿ. ತಂದೆ  ಕುಂಸಿ ಶ್ರೀನಿವಾಸಲು ನಾಯ್ತು, ತಾಯಿ ಜಗದಾಂಬ. ವೈದ್ಯರಾಗಿರುವ ಇವರ ಸಾಹಿತ್ಯ ರಚನೆ ಬಹುತೇಕ ಆರೋಗ್ಯಕ್ಕೆ ಸಂಬಂಧಿಸಿದ ಕೃತಿಗಳನ್ನೇ ಪ್ರಕಟಿಸಿದ್ದಾರೆ. ನಮಗೆಂಥ ಮಕ್ಕಳು ಬೇಕು ೧೯೮೫, ಪ್ರಸವಕ್ಕೆ ಮೊದಲೇ ಮಗುವಿನ ಭವಿಷ್ಯ ೧೯೮೫., ಗರ್ಭಿಣಿಯರಿಗೆ ಯೋಗ, Yoga for Pregnancy. ಮುಂತಾದ ಕೃತಿಗಳು ರಚನೆಗೊಂಡಿದೆ. ಮಹಿಳಾ ವೈದ್ಯರ ಸಂಸ್ಥೆಯ ಮಾಜಿ ಅಧ್ಯಕ್ಷೆ, ...

READ MORE

Related Books