ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು

Author : ರಾಜೇಶ್ವರಿ ಜಯಕೃಷ್ಣ

Pages 152

₹ 50.00




Year of Publication: 2013
Published by: ವಾಸನ್ ಪಬ್ಲಿಕೇಷನ್ಸ್
Address: : # 25,ವಾಸನ್ ಟವರ್‍ಸ್ , ಗೂಡ್ಸ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 08048535855

Synopsys

ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ರಚಿಸಿದ ಕೃತಿ-ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು. ಮಕ್ಕಳಿಗೆ ಕಥೆಗಳೆಂದರೆ ಪ್ರಾಣ. ಅವರ ಕಲ್ಪನಾ ಸಾಮರ್ಥ್ಯವನ್ನೂ ಅವು ವಿಸ್ತರಿಸುತ್ತವೆ. ಅದಕ್ಕಾಗಿಯೇ ಎಂಬಂತೆ ಪಂಚತಂತ್ರದ ಕಥೆಗಳು, ವಿಕ್ರಮ ಬೇತಾಳನ ಕಥೆಗಳು, ಹೀಗೆ ಪ್ರಾಣಿ ಪ್ರಪಂಚವನ್ನು ಬಳಸಿಕೊಂಡೇ ಮಕ್ಕಳಿಗೆ ನೀತಿಗಳನ್ನು ಬದುಕಿನ ಪ್ರೀತಿಯನ್ನು ಹೇಳುತ್ತಿದ್ದರು. ಈ ಪೈಕಿ ಅಜ್ಜ-ಅಜ್ಜಿ ಪ್ರಮುಖರು. ಎಂತಹ ಗಂಭೀರ ವಿಷಯವಾದರೂ ಪ್ರಾಣಿ ಪಕ್ಷಿಗಳನ್ನು ಬಳಸಿ ಸರಳವಾದ ರೀತಿಯಲ್ಲಿ ಹೇಳುತ್ತಿದ್ದು, ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತಿದ್ದವು. ಹೀಗಾಗಿ, ಮಕ್ಕಳು ಬೆಳೆದು ದೊಡ್ಡವರಾದಾಗಲೂ ಅವುಗಳನ್ನು ಮರೆಯುವುದು ಅಸಾಧ್ಯವಿತ್ತು. ಈ ಹಿನ್ನೆಲೆಯಲ್ಲಿ, ಲೇಖಕಿ ಮಕ್ಕಳಿಗಾಗಿ ಕಥೆಗಳನ್ನು ಬರೆಯುವುದು ಕೇವಲ ರಂಜಿಸುವುದು ಮಾತ್ರವಲ್ಲ; ನೀತಿ ಬೋಧನೆಗೂ ಉಪಯೋಗವಾಗುವ ಕಥೆಗಳನ್ನು ಸರಳ ಭಾಷೆಯಲ್ಲಿ ಬರೆದಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ರಾಜೇಶ್ವರಿ ಜಯಕೃಷ್ಣ

ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...

READ MORE

Related Books