ಮಕ್ಕಳು, ಮನಸ್ಸು ಮತ್ತು ಬೆಳವಣಿಗೆ

Author : ಎಚ್. ಗಿರಿಜಮ್ಮ

Pages 136

₹ 77.00




Year of Publication: 2016
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ವೈದ್ಯ ಸಾಹಿತಿ ಡಾ. ಎಚ್. ಗಿರಿಜಮ್ಮ ಅವರ ಕೃತಿ-ಮಕ್ಕಳು, ಮನಸ್ಸು ಮತ್ತು ಬೆಳವಣಿಗೆ. ಮಕ್ಕಳ ಮನೋ-ದೈಹಿಕ ವಿಕಾಸದಲ್ಲಿ ತಂದೆ-ತಾಯಿ-ಪೋಷಕರ ಪಾತ್ರವನ್ನು ಕೇಂದ್ರೀಕರಿಸಿ, 0-5 ವರ್ಷದ ಮಕ್ಕಳಿಗೆ ಅನ್ವಯವಾಗುವಂತೆ ಬರೆದ ವೈದ್ಯಕೀಯ ಸಲಹೆಗಳ ಕೃತಿ ಇದು. ಮಕ್ಕಳ ದೇಹ-ಮನಸ್ಸು ಎರಡೂ ಜೊತೆಜೊತೆಯಾಗೇ ಬೆಳೆಯುತ್ತಿರುತ್ತದೆ. ಒಂದನ್ನು ನಿರ್ಲಕ್ಷಿಸಿ ಮತ್ತೊಂದಕ್ಕೆ ಹೆಚ್ಚು ಗಮನ ನೀಡುವಂತಿಲ್ಲ. ಈ ಬಗ್ಗೆ ಅರ್ಥಪೂರ್ಣ ಸಲಹೆ ರೂಪದ ಅಂಶಗಳು ಈ ಕೃತಿಯಲ್ಲಿವೆ.

About the Author

ಎಚ್. ಗಿರಿಜಮ್ಮ - 17 August 2021)

ಡಾ. ಎಚ್. ಗಿರಿಜಮ್ಮ- ಹುಟ್ಟಿದ್ದು ದಾವಣಗೆರೆ. ಪಿಯುಸಿವರೆಗೆ ಓದಿದ್ದು ಅಲ್ಲಿಯೇ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ. ಯಶಸ್ವಿ ವೈದ್ಯಳಾಗಬೇಕು ಎನ್ನುವ ಅವರ ತಾಯಿಯ ಆಸೆ ಅವರನ್ನು ವೈದ್ಯಕೀಯ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದವರು ಗಿರಿಜಮ್ಮ. ಅವರ ಮೊದಲ ಕತೆ ಹೂಬಳ್ಳಿಗೆ ಈ ಆಸರೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳು ಪ್ರಕಟವಾಗಿವೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು ಮಯೂರದಲ್ಲಿ ಪ್ರಕಟವಾಗಿವೆ. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ...

READ MORE

Related Books