ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?

Author : ಕೆ.ಎಂ.ವಿಶ್ವನಾಥ ಮರತೂರ

₹ 200.00




Year of Publication: 2021
Published by: ಸ್ನೇಹ ಬುಕ್ ಹೌಸ್
Address: ಶ್ರೀ ನಗರ, ಬೆಂಗಳೂರು
Phone: 9845031335

Synopsys

ಲೇಖಕ ಕೆ.ಎಂ.ವಿಶ್ವನಾಥ ಮರತೂರ ಅವರ ಲೇಖನಗಳ ಸಂಕಲನ ‘ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?’. ಸಚಿವರು ಎಸ್. ಸುರೇಶ್ ಕುಮಾರ್ ಮಾತ್ರವಲ್ಲದೆ ಕೆ.ಎ.ಎಸ್ ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಡಾ. ಶಾಲಿನಿ ರಜನೀಶ್ – ಐ.ಎ.ಎಸ್ ಅವರೂ ಸಹ ಈ ಕೃತಿಯಲ್ಲಿ ಮುನ್ನುಡಿ ಹಾಗೂ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

ಮುನ್ನುಡಿಯ ಮಾತಿನಲ್ಲಿ ಡಾ. ಶಾಲಿನಿ ರಜನೀಶ್ ಅವರು ಹೇಳುವಂತೆ ,’ “ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?” ಪುಸ್ತಕವು ಶಿಕ್ಷಣ ಕ್ಷೇತ್ರದಲ್ಲಿನ ಶಿಕ್ಷಕರು, ಮಕ್ಕಳು ಮತ್ತು ಪಾಲಕರನ್ನು ಪ್ರತಿಬಿಂಬಿಸುತ್ತದೆ. ಈ ಪುಸ್ತಕದಲ್ಲಿ ಲೇಖಕರು ಮನೆಯಂಬ ಪಾಠಶಾಲೆ, ಸರಕಾರಿ ಶಾಲೆಗಳ ಸಬಲೀಕರಣ, ಮಕ್ಕಳ ಪರೀಕ್ಷೆ ಮತ್ತು ಭಯ, ಸರಕಾರದ ಮದ್ಯಾನದ ಬಿಸಿಯೂಟ, ಮಕ್ಕಳಿಗೆ ಚಾರಣದ ಅವಶ್ಯಕತೆ, ಮಕ್ಕಳು ಮೆಚ್ಚುವ ಶಿಕ್ಷಕರಾಗಲು ಅರ್ಹತೆಗಳು, ಮಕ್ಕಳ ಗ್ರಂಥಾಲಯ, ಪಾಲಕರ ಕರ್ತವ್ಯಗಳನ್ನು ಹೀಗೆ ಶಿಕ್ಷಣದ ವಿವಿಧ ಪ್ರಕಾರಗಳಲ್ಲಿ ಧನಾತ್ಮಕ ದೃಷ್ಠಿ ಹಾಯಿಸುತ್ತಾರೆ. ಆದರ್ಶ ವಿದ್ಯಾರ್ಥಿಯಾಗಲು ಇರಬೇಕಾದ ಗುಣಗಳು. ದೈವ ದೇಗುಲದ ಜೊತೆಗೆ, ಜ್ಞಾನ ದೇಗುಲ ಕಟ್ಟೋಣವೇ? ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು? ನಮ್ಮ ಮಕ್ಕಳಿಗೆ ಪುಸ್ತಕಗಳನ್ನು ಮರು ಪರಿಚಯಿಸಲು ಇದು ಸಕಾಲ. ತೆರೆದ ಪುಸ್ತಕ ಪರೀಕ್ಷೆಗಳು, ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ? ಈ ಲೇಖನಗಳ ಮೂಲಕ ಶಿಕ್ಷಣ ಇಲಾಖೆಯ ಆಳ ಅಗಲಗಳನ್ನು ಲೇಖಕರು ತಮ್ಮ ಸ್ವಂತ ಅನುಭವದ ಮೂಲಕ ಪರಿಚಯಿಸುತ್ತಾರೆ’ ಎಂದಿದ್ದಾರೆ.

About the Author

ಕೆ.ಎಂ.ವಿಶ್ವನಾಥ ಮರತೂರ
(15 June 1985)

ಲೇಖಕ ಕೆ.ಎಂ.ವಿಶ್ವನಾಥ ಮರತೂರ, ಕಲಬುರ್ಗಿ ಜಿಲ್ಲೆಯ ಶಹಾಬಾದ್  ತಾಲೂಕಿನ ಮರತೂರು ಗ್ರಾಮದವರು. ಕಲಬುರ್ಗಿಯಲ್ಲಿ ಎಂ.ಎಸ್.ಸಿ. ಬಿ.ಈಡಿ.  ಪದವೀಧರರು. ಕುವೆಂಪು ಅವರ 109ನೇ ಜನ್ಮ ದಿನೋತ್ಸವದಂದು ಮೈಸೂರಿನಲ್ಲಿ ನಡೆದ ರಾಜ್ಯ ಕವನ ಸ್ಪರ್ಧೆಯಲ್ಲಿ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಪಡೆದವರು. 2015-16 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ "ಜಾಗತೀಕರಣ & ದಲಿತರ ಸಂಕಷ್ಟಗಳು" ವಿಷಯದ ಮೇಲೆ ಫೆಲೋಶಿಪ್ (2015-16 ) ಪ್ರಬಂಧ ಹಾಗೂ ಇದೇ ಸಾಲಿನಲ್ಲಿ ವಿಶ್ವ ಅಕ್ಕ ಕನ್ನಡ ಸಮ್ಮೇಳನದ ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. “ಭಾರತದ ಭವಿಷ್ಯ ಮತ್ತು ಸಂವಿಧಾನ” ರಾಜ್ಯ ಪ್ರಬಂಧ ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಸ್ಥಾನ ದೊರಕಿದೆ.  ...

READ MORE

Related Books